26 ವರ್ಷಗಳ ಬಳಿಕ ಬ್ರಿಟನ್ ಗೆ ಮೊದಲ ಮಹಿಳಾ ಪ್ರಧಾನಿ

ಇತ್ತೀಚೆಗಷ್ಟೇ ಯೂರೋಪಿಯನ್ ಒಕ್ಕೂಟದಿಂದ ಹೊರಬಿದ್ದ ಬ್ರಿಟನ್ ದೇಶಕ್ಕೆ ಸತತ 26 ವರ್ಷಗಳ ಬಳಿಕ ಮೊದಲ ಮಹಿಳಾ ಪ್ರಧಾನಿಯಾಗಿ ತೆರೇಸಾ ಮೇ ಆಯ್ಕೆಯಾಗಿದ್ದಾರೆ...
ಬ್ರಿಟನ್ ಭಾವಿ ಪ್ರಧಾನಿ ತೆರೇಸಾ ಮೇ (ಸಂಗ್ರಹ ಚಿತ್ರ)
ಬ್ರಿಟನ್ ಭಾವಿ ಪ್ರಧಾನಿ ತೆರೇಸಾ ಮೇ (ಸಂಗ್ರಹ ಚಿತ್ರ)

ಲಂಡನ್: ಇತ್ತೀಚೆಗಷ್ಟೇ ಯೂರೋಪಿಯನ್ ಒಕ್ಕೂಟದಿಂದ ಹೊರಬಿದ್ದ ಬ್ರಿಟನ್ ದೇಶಕ್ಕೆ ಸತತ 26 ವರ್ಷಗಳ ಬಳಿಕ ಮೊದಲ ಮಹಿಳಾ ಪ್ರಧಾನಿಯಾಗಿ ತೆರೇಸಾ ಮೇ ಆಯ್ಕೆಯಾಗಿದ್ದಾರೆ.

ಬ್ರಿಟನ್ ನೂತನ ಪ್ರಧಾನಿ ಹುದ್ದೆ ರೇಸ್ ನಲ್ಲಿದ್ದ ಪ್ರಮುಖ ಆಕಾಂಕ್ಷಿ 52 ವರ್ಷದ ಹಾಲಿ ಇ೦ಧನ ಸಚಿವೆ ಲೀಡ್ಸೊಮ್ ಸೋಮವಾರ ಏಕಾಏಕಿ ತಮ್ಮ ನಿಧಾ೯ರ ಬದಲಿಸಿ, ಬ್ರಿಟನ್ ಐರೋಪ್ಯ  ಒಕ್ಕೂಟದಲ್ಲಿ ಉಳಿಯುವುದ ಕುರಿತು ಬೆ೦ಬಲ ನೀಡುವುದಾಗಿ ಹೇಳಿದರು. ಈ ಹಿನ್ನಲೆಯಲ್ಲಿ ಅ೦ತಿಮವಾಗಿ ತೆರೇಸಾ ಮೇ ಮಾತ್ರ ಪ್ರಧಾನಿ ಹುದ್ದೆ ಕಣದಲ್ಲಿ ಉಳಿದಿದ್ದರು. ಬ್ರೆಕ್ಸಿಟ್ ಪರ ಅಭಿಯಾನ ನಡೆಸಿದ್ದ ಬೋರಿಸ್ ಜಾನ್ಸನ್ ಹಾಗೂ ಮೈಕೆಲ್ ಗೋವ್ ಅವರು ತೆರೇಸಾಗೆ ಬೆ೦ಬಲ ವ್ಯಕ್ತಪಡಿಸಿದ್ದರು. ಇದರಿ೦ದ ತೆರೇಸಾರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತು.

ಈ ಮೂಲಕ 26 ವರ್ಷಗಳ ಬಳಿಕ ಮಹಿಳೆಯೊಬ್ಬರು ಬ್ರಿಟನ್ ದೇಶದ ಪ್ರಧಾನಿ ಹುದ್ದೆಗೇರುತ್ತಿದ್ದು, ಈ ಹಿಂದೆ ಬ್ರಿಟನ್ ಮೊದಲ ಮಹಿಳಾ ಪ್ರಧಾನಿಯಾಗಿ ಮಾಗ೯ರೇಟ್ ಥ್ಯಾಚರ್ ಅವರ  ಆಯ್ಕೆಯಾಗಿದ್ದರು. ಅವರ ಬಳಿಕ ಅಂದರೆ ಸತತ 26 ವರ್ಷಗಳ ಬಳಿಕ ಬ್ರಿಟನ್ ಎರಡನೇ ಬಾರಿಗೆ ಮಹಿಳಾ ಪ್ರಧಾನಿಯನ್ನು ಹೊಂದುತ್ತಿದೆ.

ಕಠಿಣ ನಿಲುವುಗಳಿಂದಲೇ ಖ್ಯಾತಿಗಳಿಸಿದ್ದ ತೆರೆಸಾ ಮೇ
ಪ್ರಸ್ತುತ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ತೆರೇಸಾ ಮೇ ತಮ್ಮ ಕಠಿಣ ನಿಲುವುಗಳಿಂದಲೇ ಖ್ಯಾತಿ ಗಳಿಸಿದ್ದವರು. ಈ ಹಿಂದೆ ಬ್ರಿಟನ್ ವಿದೇಶಾ೦ಗ ಹಾಗೂ ಗೃಹ  ಸಚಿವೆಯಾಗಿದ್ದ ತೆರೇಸಾ ಮೇ ಅವರು, ವಲಸೆ, ಡ್ರಗ್ಸ್ ನೀತಿ, ಕೌಟು೦ಬಿಕ ವಲಸೆ ಮತ್ತಿತರ ನೀತಿನಿಲುವುಗಳ ಕುರಿತಂತೆ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಅಲ್ಲದೆ  ಕುಖ್ಯಾತ ಮೂಲಭೂತ ವಾದಿ ಅಬು ಕಟಾಡಾನನ್ನು ದೇಶದಿ೦ದ ಗಡಿಪಾರು ಮಾಡುವ ದೃಢ ನಿರ್ಧಾರ ಕೂಡ ತೆರೆಸಾ ಮೇ ಅವರ ಹೆಸರು ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ  ಮಾಡಿತ್ತು. ಇದೇ ವೇಳೆ ಸಲಿಂಗಿ ಮದುವೆಯನ್ನು ಬೆಂಬಲಿಸುವ ಮೂಲಕ ಹಲವರ ಕೆಂಗಣ್ಣಿಗೂ ತೆರೆಸಾ ಮೇ ಗುರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com