ಫ್ರಾನ್ಸ್ ಆಂತರಿಕ ತುರ್ತು ಪರಿಸ್ಥಿತಿ ಮತ್ತೆ 3 ತಿಂಗಳ ಅವಧಿಗೆ ವಿಸ್ತರಣೆ

ಗುರುವಾರ ರಾತ್ರಿ ನೈಸ್ ನಗರದ ಮೇಲೆ ಉಗ್ರಗಾಮಿಯೊಬ್ಬ ನಡೆಸಿದ ಭೀಕರ ದಾಳಿ ಬೆನ್ನಲ್ಲೇ ಈ ಹಿಂದೆ ಪ್ಯಾರಿಸ್ ದಾಳಿ ಬಳಿಕ ಫ್ರಾನ್ಸ್ ನಲ್ಲಿ ಹೇರಲಾಗಿದ್ದ ಆಂತರಿಕ ತುರ್ತು ಪರಿಸ್ಥಿತಿಯನ್ನು ಮತ್ತೆ 3 ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ..
ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ (ಸಂಗ್ರಹ ಚಿತ್ರ)
ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ (ಸಂಗ್ರಹ ಚಿತ್ರ)

ಪ್ಯಾರಿಸ್: ಗುರುವಾರ ರಾತ್ರಿ ನೈಸ್ ನಗರದ ಮೇಲೆ ಉಗ್ರಗಾಮಿಯೊಬ್ಬ ನಡೆಸಿದ ಭೀಕರ ದಾಳಿ ಬೆನ್ನಲ್ಲೇ ಈ ಹಿಂದೆ ಪ್ಯಾರಿಸ್ ದಾಳಿ ಬಳಿಕ ಫ್ರಾನ್ಸ್ ನಲ್ಲಿ ಹೇರಲಾಗಿದ್ದ ಆಂತರಿಕ ತುರ್ತು  ಪರಿಸ್ಥಿತಿಯನ್ನು ಮತ್ತೆ 3 ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ.

ನಿನ್ನೆ ನೈಸ್ ನಗರದ ಮೇಲೆ ನಡೆದ ಭೀಕರ ದಾಳಿ ಬೆನ್ನಲ್ಲೇ ತಡರಾತ್ರಿಯಲ್ಲಿ ಫ್ರಾನ್ಸ್ ನ ಭದ್ರತಾ ಅಧಿಕಾರಿಗಳೊಂದಿಗೆ ತುರ್ತು ಉನ್ನತ ಮಟ್ಟದ ಸಭೆ ನಡೆಸಿದ ಅಧ್ಯಕ್ಷ ಫ್ರಾಂಕೋಯಿಸ್  ಹೊಲಾಂಡೆ ಅವರು ಮತ್ತೆ 3 ತಿಂಗಳ ಕಾಲ ಆಂತರಿಕ ತುರ್ತು ಪರಿಸ್ಥಿತಿಯನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇಂದು ಬೆಳಗ್ಗೆ ಫ್ರಾನ್ಸ್ ಸರ್ಕಾರ ಅಧಿಕೃತ ಘೋಷಣೆ  ಹೊರಡಿಸಿದ್ದು, ಜುಲೈ 23ಕ್ಕೆ ಕೊನೆಗೊಳ್ಳಬೇಕಿದ್ದ ಆಂತರಿಕ ತುರ್ತು ಪರಿಸ್ಥಿತಿಯನ್ನು ಮತ್ತೆ ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ.

ನೈಸ್ ನಗರದ ಮೇಲೆ ದಾಳಿ ಮಾಡಿದ್ದ ಉಗ್ರ ತನ್ನೊಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇರಿದಂತೆ ತನ್ನೊಂದಿಗೆ ತಂದಿದ್ದ ಟ್ರಕ್ ನಲ್ಲಿ ಬರೊಬ್ಬರಿ 25 ಟನ್ ತೂಕದ ಭಾರಿ ಪ್ರಮಾಣದ  ಸ್ಫೋಟಕಗಳನ್ನು ತಂದಿದ್ದ. ಈ ಹಿಂದೆ ಪ್ಯಾರಿಸ್ ಮೇಲೆ ಇಸಿಸ್ ಉಗ್ರರು ಮುಂಬೈ ಮಾದರಿಯಲ್ಲಿ ದಾಳಿ ನಡೆಸಿದ್ದಾಗ ಫ್ರಾನ್ಸ್ ನಾದ್ಯಂತ ಆಂತರಿಕ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಈ  ಹಿನ್ನಲೆಯಲ್ಲಿ ಫ್ರಾನ್ಸ್ ನಾದ್ಯಂತ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೀಗಿದ್ದು ಉಗ್ರನೋರ್ವ ಅಷ್ಚು ಭಾರಿ ಪ್ರಮಾಣದ ಸ್ಫೋಟಕಗಳನ್ನು ನಗರದೊಳಗೆ  ತಂದಿದ್ದಾರೂ ಹೇಗೆ ಎಂಬ ಅನುಮಾನ ಮೂಡತೊಡಗಿದ್ದು, ಈ ಬಗ್ಗೆ ಫ್ರಾನ್ಸ್ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com