ನೀಸ್ ಉಗ್ರ ದಾಳಿ; 4 ಮಂದಿ ಗಾಯಾಳುಗಳ ಸಾವು; 84ಕ್ಕೇರಿದ ಸಾವಿನ ಸಂಖ್ಯೆ

ಫ್ರಾನ್ಸ್ ನ ನೀಸ್ ನಗರದ ಮೇಲೆ ಇಸಿಸ್ ಉಗ್ರಗಾಮಿ ನಡೆಸಿದ ಭೀಕರ ಟ್ರಕ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 84ಕ್ಕೆ ಏರಿಕೆಯಾಗಿದ್ದು, ನಿನೆ ಗಂಭೀರ ಸ್ಥಿತಿಯಲ್ಲಿದ್ದ 4 ಮಂದಿ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ...
ಉಗ್ರ ದಾಳಿ ನಡೆದ ಪ್ರದೇಶದಲ್ಲಿ ಅಹೋರಾತ್ರಿ ಕಾರ್ಯಾಚರಣೆ ನಡೆಸಿದ ಫ್ರಾನ್ಸ್ ಭದ್ರತಾ ಪಡೆಗಳು (ಎಎಫ್ ಪಿ ಚಿತ್ರ)
ಉಗ್ರ ದಾಳಿ ನಡೆದ ಪ್ರದೇಶದಲ್ಲಿ ಅಹೋರಾತ್ರಿ ಕಾರ್ಯಾಚರಣೆ ನಡೆಸಿದ ಫ್ರಾನ್ಸ್ ಭದ್ರತಾ ಪಡೆಗಳು (ಎಎಫ್ ಪಿ ಚಿತ್ರ)

ನೀಸ್: ಫ್ರಾನ್ಸ್ ನ ನೀಸ್ ನಗರದ ಮೇಲೆ ಇಸಿಸ್ ಉಗ್ರಗಾಮಿ ನಡೆಸಿದ ಭೀಕರ ಟ್ರಕ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 84ಕ್ಕೆ ಏರಿಕೆಯಾಗಿದ್ದು, ನಿನೆ ಗಂಭೀರ ಸ್ಥಿತಿಯಲ್ಲಿದ್ದ 4 ಮಂದಿ  ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ ತಡರಾತ್ರಿ ನಡೆದ ಈ ಭೀಕರ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪೈಕಿ 14 ಮಂದಿಯ ಸ್ಥಿತಿ ಚಿಂತಾಜನಕವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಇದರಲ್ಲಿ  ಇಂದು ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ ಎಂದು ಫ್ರಾನ್ಸ್ ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ 8 ತಿಂಗಳಲ್ಲೇ ಫ್ರಾನ್ಸ್ ನಲ್ಲಿ ನಡೆದ 2ನೇ ಅತೀ ದೊಡ್ಡ ಭಯೋತ್ಪಾದಕ ದಾಳಿ ಇದಾಗಿದ್ದು,  ಪೂರ್ವ ಸಿದ್ಧತೆ ಮಾಡಿಕೊಂಡೇ ಬಂದಿದ್ದ ಟ್ಯುನಿಷಿಯಾ ಮೂಲದ ಉಗ್ರ ಬರೊಬ್ಬರಿ 25 ಟನ್ ಸ್ಫೋಟಕ ತುಂಬಿದ್ದ ಭಾರಿ ಟ್ರಕ್ ಅನ್ನು ಜನರ ಮೇಲೆ ಹರಿಸಿದ್ದ.

ಇದರಿಂದಾಗಿ ನಿನ್ನೆ ಸ್ಥಳದಲ್ಲೇ 80 ಮಂದಿ ಸಾವಿಗೀಡಾಗಿದ್ದರು. ಅಲ್ಲದೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ರಾಷ್ಟ್ರಧ್ವಜವನ್ನು ಅರ್ಧಕ್ಕಿಳಿಸಿ ಶ್ರದ್ಧಾಂಜಲಿ
ಇದೇ ವೇಳೆ ನಿನ್ನೆ ರಿವೀರಾ ಬೀಚ್ ರೆಸಾರ್ಟ್ ನಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಕೋರುತ್ತಾ ಮತ್ತು ಉಗ್ರ ದಾಳಿಯನ್ನು ಖಂಡಿಸುವ ನಿಟ್ಟಿನಲ್ಲಿ ಇಂದು ಫ್ರಾನ್ಸ್ ದೇಶಾದ್ಯಂತ  ರಾಷ್ಟ್ರಧ್ವಜವನ್ನು ಅರ್ಧಕ್ಕಿಳಿಸಲಾಗಿತ್ತು. ಅಂತೆಯೇ ಘಟನಾ ಪ್ರದೇಶಕ್ಕೆ ಫ್ರಾನ್ಸ್ ನ ಗೃಹ ಸಚಿವ ಬರ್ನಾರ್ಡ್ ಕೆಜೆನ್ಯೂವೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಭದ್ರತಾ  ಅಧಿಕಾರಿಗಳಿಂದ ಮಾಹಿತಿ ಪಡೆದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com