ಭಾರತದೊಂದಿಗಿನ ವಾಣಿಜ್ಯ, ವಿದೇಶಾಂಗ ಸಂಬಂಧಗಳನ್ನು ಸ್ಥಗಿತಗೊಳಿಸಿ: ಉಗ್ರ ಹಫೀಜ್ ಸಯೀದ್

ಭಾರತದೊಂದಿಗಿನ ವಿದೇಶಾಂಗ, ವಾಣಿಜ್ಯ ಸಂಬಂಧಗಳನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಉಗ್ರ ಹಫೀಜ್ ಸಯೀದ್ ಪಾಕಿಸ್ತಾನ ಸರ್ಕಾರವನ್ನು ಆಗ್ರಹಿಸಿದ್ದಾನೆ.
ಹಫೀಜ್ ಸಯೀದ್
ಹಫೀಜ್ ಸಯೀದ್

ಲಾಹೋರ್: ಭಾರತದೊಂದಿಗಿನ ವಿದೇಶಾಂಗ, ವಾಣಿಜ್ಯ ಸಂಬಂಧಗಳನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಜಮಾತ್‌-ಉದ್‌-ದಾವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನ ಸರ್ಕಾರವನ್ನು ಆಗ್ರಹಿಸಿದ್ದಾನೆ.

ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಉಗ್ರ ಬುರ್ಹಾನ್ ಮುಜಾಫರ್ ವಾನಿ ಹತ್ಯೆಯ ನಂತರ ಉಗ್ರ ಹಫೀಜ್ ಸಯೀದ್, ಭಾರತದ ವಿರುದ್ಧ ಕಿಡಿಕಾರಿದ್ದು, ಭಾರತದೊಂದಿಗೆ ನಮಗೆ ವಾಣಿಜ್ಯ ಸಂಬಂಧ ಬೇಡ, ತಕ್ಷಣವೇ ಭಾರತದೊಂದಿಗಿನ ವಿದೇಶಾಂಗ ಸಂಬಂಧವನ್ನು ರದ್ದುಗೊಳಿಸಿ ಎಂದು ಪಾಕಿಸ್ತಾನ ಸರ್ಕಾರಕ್ಕೆ ಒತ್ತಾಯಿಸಿದ್ದಾನೆ. ಭಾರತದಲ್ಲಿರುವ ಪಾಕಿಸ್ತಾನದ ಎಲ್ಲಾ ರಾಯಭಾರಿಗಳನ್ನು ವಾಪಸ್ ಕರೆಸಿಕೊಳ್ಳಬೇಕು, ಹಾಗೆಯೇ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿಯನ್ನು ವಾಪಸ್ ಭಾರತಕ್ಕೆ ಕಳಿಸಬೇಕು ಎಂದಿರುವ ಹಫೀಜ್ ಸಯೀದ್, ಪಾಕಿಸ್ತಾನ ಕಾಶ್ಮೀರ ಪ್ರತ್ಯೇಕತಾವಾದಿಗಳ ಪರವಾಗಿದೆ ಎಂದು ಹೇಳಿದ್ದಾನೆ. ಈಗಾಗಲೇ ಉಗ್ರ ಹಫೀಜ್ ತಲೆಗೆ ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com