ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಮುಖ ಘಟ್ಟ ತಲುಪಿದ್ದು, ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ.
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಮುಖ ಘಟ್ಟ ತಲುಪಿದ್ದು, ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಬರೊಬ್ಬರಿ 16 ಅಭ್ಯರ್ಥಿಗಳನ್ನು ಹಿಂದಿಕ್ಕಿವು ಮೂಲಕ ಟ್ರಂಪ್ ಅಧಿಕೃತವಾಗಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ. ಈ ವಿಚಾರವನ್ನು ಸ್ವತಃ  ಅವರ ಪುತ್ರ ಜೂನಿಯರ್ ಟ್ರಂಪ್ ಘೋಷಣೆ ಮಾಡಿದ್ದು, ಅಭ್ಯರ್ಥಿ ಸ್ಪರ್ಧೆಗಾಗಿ ಬೇಕಿದ್ದ  1,237 ಮತಗಳನ್ನು ಪಡೆಯುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ. ಪಕ್ಷದ ಪ್ರತಿನಿಧಿಗಳು ತಮ್ಮ ತಂದೆಯ  ಮೇಲಿರಿಸಿರುವ ನಂಬಿಕೆಯನ್ನು ಅವರು ಉಳಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಿದ್ದಾರೆ.

ನ್ಯೂಯಾರ್ಕ್‍ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಯಾಗಿದ್ದ ಇಂಡಿಯಾನಾ ಗವರ್ನರ್ ಮೈಕ್ ಪೆನ್ಸ್ ಅವರು ಧ್ವನಿ ಮತದ  ಮೂಲಕ ಟ್ರಂಪ್ ಗೆ ಬೆಂಬಲ ಘೋಷಿಸುತ್ತಿದ್ದಂತೆಯೇ ಟ್ರಂಪ್ ಅಧಿಕೃತವಾಗಿ ಆಯ್ಕೆಯಾದರು. ಪೆನ್ಸ್ ಮತ ಟ್ರಂಪ್ ಗೆ ಬೀಳುತ್ತಿದ್ದಂತೆಯೇ  ಅವರ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ  ತೊಡಗಿದ್ದಾರೆ. ನ್ಯೂಯಾರ್ಕ್ ನ  ಫ್ರಾಂಕ್ ಸಿನಾಟ್ರಾದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಟ್ರಂಪ್ ಬೆಂಬಲಿಗರು ಅವರ ಪರ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು.

ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಇಂಡಿಯಾನಾ ಗವರ್ನರ್ ಮೈಕ್ ಪೆನ್ಸ್ ಸೇರಿದಂತೆ, ಹೌಸ್ ಸ್ಪೀಕರ್ ಪಾಲ್ ರ್ಯಾನ್, ಹೌಸ್ ಮೆಜಾರಿಟಿ ಲೀಡರ್ ಕೆವಿನ್ ಮೆಕ್ ಕಾರ್ಥಿ, ಸೆನೆಟ್  ಮೆಜಾರಿಟಿ ಲೀಡರ್ ಮಿಚ್ ಮೆಕ್ ಕನೆಲ್ ಮತ್ತು ಅಲಬಾಮಾ ಸೆನೆಟರ್ ಜೆಫ್ ಸೆಷನ್ ಅವರು ಟ್ರಂಪ್ ಗೆ ಬೆಂಬಲ ಸೂಟಿಸಿದರು.

ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಷ್ಟೇ..ಅವರ ವೈಟ್ ಹೌಸ್ ಪ್ರವೇಶ ಅಸಾಧ್ಯ: ಹಿಲರಿ ಕಿಡಿ
ಟ್ರಂಪ್‍ರ ನೇಮಕಾತಿ ಕುರಿತಂತೆ ತಕ್ಷಣವೇ ಪ್ರತಿಕ್ರಿಯಿಸಿರುವ ಡೆಮಾಕ್ರಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಮಾತ್ರ ಟ್ರಂಪ್  ಆಯ್ಕೆಯಾಗಿದ್ದಾರೆ. ಅವರು ಎಂದಿಗೂ ವೈಟ್ ಹೌಸ್ ಪ್ರವೇಶಿಸಲಾರರು ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅಮೆರಿಕದ ವಲಸಿಗರು ಮತ್ತು ಮುಸ್ಲಿಮರ ವಿರುದ್ಧ ವಿವಾದಾತ್ಮಕ  ಹೇಳಿಕೆಗಳನ್ನು ನೀಡುವ ಮೂಲಕ ಜಗತ್ತಿನ ಗಮನ ಸೆಳೆದವರು. ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಜಗತ್ತಿನಾದ್ಯಂತ ಅವರ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ ಎಂದು ಹಿಲರಿ ಹೇಳಿದ್ದಾರೆ.

ಇದೇ ನವೆಂಬರ್ 8ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com