ಫ್ರಾನ್ಸ್ ನಲ್ಲಿ ಚರ್ಚ್ ಒತ್ತೆಯಿಸರಿಸಿಕೊಂಡ ಶಂಕಿತ ಉಗ್ರರು; ಮೂರು ಸಾವು

ಉತ್ತರ ಫ್ರಾನ್ಸ್ ನ ರೊಯೆನ್ ನಲ್ಲಿ ಚರ್ಚ್ ಒಂದನ್ನು ಇಬ್ಬರು ಶಸ್ತ್ರಾಸ್ತ್ರಧಾರಿಗಳು ಒತ್ತೆಯಿಸಿಕೊಂಡ ಘಟನೆ ನಡೆದಿದ್ದು, ಇಬ್ಬರು ಶಂಕಿತ ಉಗ್ರರು ಮತ್ತು ಒಬ್ಬ ಒತ್ತೆಯಾಳು ಸೇರಿದಂತೆ ಮೂವರನ್ನು ಹತ್ಯೆಗೈಯ್ಯಲಾಗಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪ್ಯಾರಿಸ್: ಉತ್ತರ ಫ್ರಾನ್ಸ್ ನ ರೊಯೆನ್ ನಲ್ಲಿ ಚರ್ಚ್ ಒಂದನ್ನು ಇಬ್ಬರು ಶಸ್ತ್ರಾಸ್ತ್ರಧಾರಿಗಳು ಒತ್ತೆಯಿಸಿಕೊಂಡ ಘಟನೆ ನಡೆದಿದ್ದು, ಇಬ್ಬರು ಶಂಕಿತ ಉಗ್ರರು ಮತ್ತು ಒಬ್ಬ ಒತ್ತೆಯಾಳು ಸೇರಿದಂತೆ ಮೂವರನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 
ಸೇಂಟ್ ಎಟಿನ್ನೇ ದು ರೋವರಿ ಚರ್ಚ್ ನಲ್ಲಿ ನಾಲ್ಕರಿಂದ ಆರು ಜನರನ್ನು ಶಂಕಿತ ಉಗ್ರರು ಒತ್ತೆಯಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. 
ಸ್ಥಳದಲ್ಲಿ ಗುಂಡಿನ ಶಬ್ದ ಕೇಳಿಬಂದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಪೊಲೀಸರು ಚರ್ಚ್ ಅನ್ನು ಸುತ್ತುವರೆದಿದ್ದಾರೆ. ಸುತ್ತುವರೆದ ಪ್ರದೇಶದಿಂದ ಜನರು ದೂರವುಳಿಯುವಂತೆ ನಾಗರಿಕರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದೆ. 
ಐಸಿಸ್ ನಿಂದ ಸ್ಫುರ್ತಿ ಪಡೆದ ವ್ಯಕ್ತಿಯೊಬ್ಬ ಇತ್ತೀಚೆಗಷ್ಟೇ ನೈಸ್ ನಗರದ ಜನನಿಬಿಡ ಪ್ರದೇಶದಲ್ಲಿ ಟ್ರಕ್ ಓಡಿಸಿ 84 ಜನರ ಸಾವಿಗೆ ಕಾರಣನಾಗಿದ್ದ ಘಟನೆಯ ಹಸಿ ನೆನಪಿನಲ್ಲಿಯೇ ಈ ಘಟನೆ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com