ನೇಪಾಳದಿಂದ ಭಾರತಕ್ಕೆ ಪ್ರಯಾಣಿಸಲು ಗುರುತು ಚೀಟಿ ಕಡ್ಡಾಯ

ನೇಪಾಳದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾನ್ಯತೆ ಪಡೆದ ಗುರುತು ಚೀಟಿ ಹೊಂದಿರಬೇಕು...
ನೇಪಾಳದ ಪಂಗ್ ಬೊಚೆ ಕಡೆಯಿಂದ ಮೌಂಟ್ ಎವರೆಸ್ಟ್ ನಲ್ಲಿ ಕಂಡ ಸೂರ್ಯಾಸ್ತಮಾನದ ದೃಶ್ಯ
ನೇಪಾಳದ ಪಂಗ್ ಬೊಚೆ ಕಡೆಯಿಂದ ಮೌಂಟ್ ಎವರೆಸ್ಟ್ ನಲ್ಲಿ ಕಂಡ ಸೂರ್ಯಾಸ್ತಮಾನದ ದೃಶ್ಯ
ಕಠ್ಮಂಡು: ನೇಪಾಳದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾನ್ಯತೆ ಪಡೆದ ಗುರುತು ಚೀಟಿ ಹೊಂದಿರಬೇಕು ಎಂದು ಭಾರತೀಯ ಭದ್ರತಾ ಸಂಸ್ಥೆಗಳು ನಿಯಮ ತಂದಿವೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ನೇಪಾಳದ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ರಾಷ್ಟ್ರೀಯ ಸಮಾಚಾರ್ ಸಮಿತಿ, ಭಾರತದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪಶ್ಚಿಮ ನೇಪಾಳ ಗಡಿಯಲ್ಲಿ ಬಿಗಿ ಭದ್ರತೆ ಕಲ್ಪಿಸಲು ಭಾರತೀಯ ಭದ್ರತಾ ಸಂಸ್ಥೆಗಳು ಮುಂದಾಗಿವೆ ಎಂದು ವರದಿ ಮಾಡಿದೆ.
ಸಾಮಾನ್ಯವಾಗಿ ನೇಪಾಳ ನಾಗರಿಕರು ಭಾರತಕ್ಕೆ ಭೇಟಿ ನೀಡಬೇಕೆಂದರೆ ವೀಸಾದ ಅವಶ್ಯಕತೆಯಿರುವುದಿಲ್ಲ. ಹಾಗೆಯೇ ಭಾರತೀಯರಿಗೂ ನೇಪಾಳಕ್ಕೆ ಹೋಗಬೇಕೆಂದರೆ ವೀಸಾ ಬೇಕಾಗಿಲ್ಲ. 
ಆದರೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬಿಗಿ ಭಾರತ-ನೇಪಾಳ ಗಡಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲು ಭಾರತೀಯ ಭದ್ರತಾ ಸಂಸ್ಥೆ ಮುಂದಾಗಿದೆ. ಅದಕ್ಕಾಗಿ ಜ್ಹುಲಗ್ಹಾಟ್ ಎಂಬ ಪ್ರಮುಖ ಬೈತಾಟಿಯ ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಭಾರತಕ್ಕೆ ಹೋಗುವ ನೇಪಾಳೀಯರಲ್ಲಿ ಮಾನ್ಯತೆ ಹೊಂದಿದ ಗುರುತು ಚೀಟಿಯಿಲ್ಲದಿದ್ದರೆ ಅಂಥವರನ್ನು ವಾಪಸ್ಸು ಕಳುಹಿಸಲಾಗುವುದು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮೋಹನ್ ಪ್ರಸಾದ್ ಪೊಕರಲ್ ತಿಳಿಸಿದ್ದಾರೆ.
ಭಾರತ-ನೇಪಾಳ ಗಡಿಯಲ್ಲಿರುವ ಜುಲಾಗಟ್, ದರ್ಚುಲಾ ಮತ್ತು ಪಿತೊರಗರ್ ಮಾರುಕಟ್ಟೆಗಳಲ್ಲಿ ಹೋಗಲು ಗುರುತು ಚೀಟಿ ಬೇಡವೆಂದರೂ ಭಾರತದ ವಿವಿಧ ಓಡಾಡಲು ಅಗತ್ಯವಿದೆ ಎಂದು ಭಾರತೀಯ ಭದ್ರತಾ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com