ಆಫ್ಘಾನ್-ಭಾರತದ ಸ್ನೇಹದ 'ಸಲ್ಮಾ ಅಣೆಕಟ್ಟು' ಉದ್ಘಾಟಿಸಿದ ಪ್ರಧಾನಿ ಮೋದಿ

ಆಫ್ಘಾನಿಸ್ತಾನದಲ್ಲಿ ಭಾರತ ನಿರ್ಮಾಣ ಮಾಡಿರುವ ಸಲ್ಮಾ ಅಣೆಕಟ್ಟನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ...
ಆಫ್ಘಾನ್-ಭಾರತದ ಸ್ನೇಹದ ಸಲ್ಮಾ ಅಣೆಕಟ್ಟು ಉದ್ಘಾಟಿಸಿದ ಮೋದಿ ನರೇಂದ್ರ ಮೋದಿ ಮತ್ತು ಅಶ್ರಫ್ ಘನಿ
ಆಫ್ಘಾನ್-ಭಾರತದ ಸ್ನೇಹದ ಸಲ್ಮಾ ಅಣೆಕಟ್ಟು ಉದ್ಘಾಟಿಸಿದ ಮೋದಿ ನರೇಂದ್ರ ಮೋದಿ ಮತ್ತು ಅಶ್ರಫ್ ಘನಿ
ಹೆರತ್: ಆಫ್ಘಾನಿಸ್ತಾನದಲ್ಲಿ ಭಾರತ ನಿರ್ಮಾಣ ಮಾಡಿರುವ ಸಲ್ಮಾ ಅಣೆಕಟ್ಟನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಶನಿವಾರ ಉದ್ಘಾಟಿಸಿದ್ದಾರೆ. 
ಈ ಅಣೆಕಟ್ಟು ನಿರ್ಮಾಣಕ್ಕೆ ಒಟ್ಟು ರು.1,700ಕೋಟಿ ವೆಚ್ಚವಾಗಿದೆ. ಅಣೆಕಟ್ಟು ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ, ಭಾರತ ಸಹಕಾರದಿಂದ ಆಫ್ಘಾನಿಸ್ತಾನ ತನ್ನ 40 ವರ್ಷಗಳ ಕನಸನ್ನು ನನಸಾಗಿಸಿಕೊಂಡಿದೆ. ಇದು ನಮ್ಮ ಗೆಳೆತನದ ಸಂಕೇತ. ಹೆರಾತ್ ನಲ್ಲಿ ಭೂಮಿಯನ್ನು ಫಲವತ್ತಾಗಿಸಿ ಅಲ್ಲಿನ ಜನರಿಗೆ ಬದುಕು ಕಟ್ಟಿಕೊಡಲಾಗುತ್ತದೆ. 
1976ರಲ್ಲಿ ನಿರ್ಮಾಣಗೊಂಡಿದ್ದ ಸಲ್ಮಾ ಡ್ಯಾಮ ಆಫ್ಘಾನಿಸ್ತಾನ ನಾಗರಿಕ ಯುದ್ಧದ ಸಂದರ್ಭದಲ್ಲಿ ಹಾನಿಗೊಳಗಾಗಿತ್ತು. ಅದನ್ನು ಭಾರತದ ಸಹಯೋಗದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಇದು ಪಶ್ಚಿಮ ಹೇರತ್ ನಲ್ಲಿದ್ದು, ಆಫ್ಘಾನಿಸ್ತಾನದೊಂದಿಗೆ ಭಾರತ ಅಭಿವೃದ್ಧಿ ಪಾಲುದಾರಿಕೆ ನಿಧಿಯ ರು.1700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 
ಚಿಸ್ತ್ ಎ ಶರೀಫ್ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟು 75 ಸಾವಿರ ಹೆಕ್ಕೇರ್ ಗಳಿಗೆ ನೀರು ಪೂರೈಸಲಿದೆ ಹಾಗೂ 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ. ಈ ಅಣೆಕಟ್ಟು ನಿರ್ಮಾಣಕ್ಕೆ ಭಾರತ ಮತ್ತು ಆಫ್ಘಾನಿಸ್ತಾನದ ಇಂಜಿನಿಯರ್, ತಂತ್ರಜ್ಞರು ಸೇರಿ ಸುಮಾರು 1500 ಮಂದಿ ದುಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com