ಸ್ವೀಡನ್ ಜಗತ್ತಿನ ಅತ್ಯಂತ ಉತ್ತಮ ದೇಶ; ಭಾರತಕ್ಕೆ 70ನೇ ಸ್ಥಾನ

ಜನರ ಹಿತಾಸಕ್ತಿ, ಬೇಡಿಕೆಗಳನ್ನು ಈಡೇರಿಸುವಲ್ಲಿ ಸ್ವೀಡನ್ ಜಗತ್ತಿನಲ್ಲಿ ಅತ್ಯುತ್ತಮ ದೇಶವಾಗಿದೆ. ಜಗತ್ತಿನ 163...
ಸ್ವೀಡನ್ ದೇಶದ ಒಂದು ಸ್ಥಳ
ಸ್ವೀಡನ್ ದೇಶದ ಒಂದು ಸ್ಥಳ

ಲಂಡನ್: ಜನರ ಹಿತಾಸಕ್ತಿ, ಬೇಡಿಕೆಗಳನ್ನು ಈಡೇರಿಸುವಲ್ಲಿ  ಸ್ವೀಡನ್ ಜಗತ್ತಿನಲ್ಲಿ ಅತ್ಯುತ್ತಮ ದೇಶವಾಗಿದೆ. ಜಗತ್ತಿನ 163 ದೇಶಗಳಲ್ಲಿ ಭಾರತಕ್ಕೆ 70ನೇ ಸ್ಥಾನದಲ್ಲಿದೆ.

ಉತ್ತಮ ದೇಶ-2015ರ ಪಟ್ಟಿಯಲ್ಲಿ ಪ್ರತಿಯೊಂದು ದೇಶಗಳು ಜಾಗತಿಕ ಮಟ್ಟದಲ್ಲಿ ಅವುಗಳು ದೇಶದ ನಾಗರಿಕರಿಗೆ ಮಾಡುತ್ತಿರುವ ಕೆಲಸಗಳ ಆಧಾರದಲ್ಲಿ ಸ್ವೀಡನ್ ಅತ್ಯುತ್ತಮ ದೇಶ ಎಂದು ಪರಿಗಣಿಸಲ್ಪಟ್ಟಿದೆ. ವಿಶ್ವಸಂಸ್ಥೆ ಮತ್ತು ವಿಶ್ವಬ್ಯಾಂಕ್ ನೀಡಿದ 35 ವಿವಿಧ ಮಾಹಿತಿ ಆಧಾರದ ಮೇಲೆ ಜಗತ್ತಿನ 163 ದೇಶಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ವಿಜ್ಞಾನ, ಸಂಸ್ಕೃತಿ, ಶಾಂತಿ ಮತ್ತು ಭದ್ರತೆ, ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಸಮಾನತೆ ಆಧಾರದಲ್ಲಿ ದೇಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.

ವಿಶ್ವದ ಅತ್ಯುತ್ತಮ 10 ರಾಷ್ಟ್ರಗಳು ಸ್ವೀಡನ್, ಡೆನ್ಮಾರ್ಕ್, ನೆದರ್ಲ್ಯಾಂಡ್, ಇಂಗ್ಲೆಂಡ್, ಜರ್ಮನಿ, ಫಿನ್ಲ್ಯಾಂಡ್, ಕೆನಡಾ, ಫ್ರಾನ್ಸ್, ಆಸ್ಟ್ರಿಯಾ ಮತ್ತು ನ್ಯೂಜಿಲ್ಯಾಂಡ್ ಗಳಾಗಿವೆ. ವಿಶ್ವದಲ್ಲಿ ಅತ್ಯಂತ ಕಳಪೆ ದೇಶ ಲಿಬಿಯಾವಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಭಾರತಕ್ಕೆ 70ನೇ ಸ್ಥಾನ ಲಭಿಸಿದೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯಲ್ಲಿ ಭಾರತಕ್ಕೆ 27ನೇ ಸ್ಥಾನ ಸಿಕ್ಕಿದ್ದರೆ, ಸಮೃದ್ಧಿ ಮತ್ತು ಸಮಾನತೆಯಲ್ಲಿ 124ನೇ ಸ್ಥಾನ ಹೊಂದಿದೆ. ಆರೋಗ್ಯದಲ್ಲಿ ಭಾರತಕ್ಕೆ 37ನೇ ಸ್ಥಾನ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 62ನೇ ಸ್ಥಾನ, ಸಂಸ್ಕೃತಿಯಲ್ಲಿ 119, ಹವಾಮಾನದಲ್ಲಿ 106ನೇ ಸ್ಥಾನ ಮತ್ತು ವಿಶ್ವ ಆದೇಶದಲ್ಲಿ 100ನೇ ಸ್ಥಾನ ಪಡೆದಿದೆ.

ಬ್ರಿಟಿಷ್ ಸರ್ಕಾರದ ಸಲಹೆಗಾರ ಸಿಮೋನ್ ಅನ್ ಹೋಲ್ಟ್ ಅರ್ಧವಾರ್ಷಿಕ ಸೂಚ್ಯಂಕವನ್ನು ಸ್ಥಾಪಿಸಿದ್ದು, ದೇಶ-ದೇಶಗಳ ನಡುವೆ ಸಹಕಾರ, ಸೌಹಾರ್ದತೆಯನ್ನು ಬಲಪಡಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಿ ಸಮೀಕ್ಷೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com