ಮಹಿಳೆಯರು ಅನೈತಿಕವಾಗಿ ನಡೆದುಕೊಂಡರೆ ನದಿ ಬತ್ತಿ ಹೋಗುತ್ತದೆ: ಇಸ್ಲಾಮಿಕ್ ಪಾದ್ರಿ

ಮಹಿಳೆಯರು ಅಸಭ್ಯವಾಗಿ ಉಡುಪು ಧರಿಸುವುದರಿಂದ ಸಮಾಜದಲ್ಲಿ ಅತ್ಯಾಚಾರ, ಅನೈತಿಕತೆ ನಡೆಯುತ್ತದೆ ಎಂದು...
ಇರಾನ್ ಪಾದ್ರಿ ಸಯ್ಯದ್ ಯೂಸಫ್ ತಬತಬಿ
ಇರಾನ್ ಪಾದ್ರಿ ಸಯ್ಯದ್ ಯೂಸಫ್ ತಬತಬಿ

ಟೆಹ್ರಾನ್: ಮಹಿಳೆಯರು ಅಸಭ್ಯವಾಗಿ ಉಡುಪು ಧರಿಸುವುದರಿಂದ ಸಮಾಜದಲ್ಲಿ ಅತ್ಯಾಚಾರ, ಅನೈತಿಕತೆ ನಡೆಯುತ್ತದೆ ಎಂದು ಹೇಳುವವರನ್ನು ಕೇಳಿದ್ದೇವೆ. ಆದರೆ ಮಹಿಳೆಯರು ಅಸಭ್ಯವಾಗಿ ಉಡುಗೆ ತೊಟ್ಟರೆ ಅದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂದು ಇರಾನಿನ ಹಿರಿಯ ಪಾದ್ರಿಯೊಬ್ಬರು ಹೇಳಿದ್ದಾರೆ.

ಮಹಿಳೆಯರ ಅನೈತಿಕತೆಯಿಂದ ಇರಾನ್ ನ ಅತಿ ಉದ್ದವಾದ ಝಯಂದೆಹ್ ರದ್ ನದಿ ಬತ್ತಿ ಹೋಗುತ್ತದೆ ಎಂದು ಹೇಳಿದ್ದಾರೆ.ಅಲ್ಲದೆ ಇರಾನ್ ಮಹಿಳೆಯರ ಉಡುಪು, ವರ್ತನೆ ಮೇಲೆ ಕಣ್ಣಿಡುವಂತೆ ಪೊಲೀಸರನ್ನು ಪಾದ್ರಿ ಸಯ್ಯದ್ ಯೂಸಫ್ ತಬತಾಬಿ-ನೇಜದ್ ಒತ್ತಾಯಿಸಿದ್ದಾರೆ.

ತಮ್ಮ ಧರ್ಮೋಪದೇಶದಲ್ಲಿ ಸಯ್ಯದ್, ಜಯಂದೇಹ್ ರದ್ ನದಿ ಈಗಾಗಲೇ ಸಾಕಷ್ಟು ಬರಿದಾಗಿದೆ. ಈ ನದಿಯ ಪಕ್ಕದಲ್ಲಿ ಮಹಿಳೆಯರು ಅನೈತಿಕವಾಗಿ ನಡೆದುಕೊಳ್ಳುತ್ತಿದ್ದ ಫೋಟೋ ನೋಡಿದೆ. ಇದನ್ನು ನೋಡಿದಾಗ ಅವರು ಯುರೋಪ್ ನಲ್ಲಿದ್ದಾರೇನೋ ಎನಿಸುತ್ತದೆ. ಇದರಿಂದ ನದಿ ಮತ್ತಷ್ಟು ಬರಿದುಹೋಗುತ್ತದೆ. ಇಂತಹ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಇಸ್ಲಾಮಿಕ್ ಪದ್ಧತಿಗೆ ವಿರುದ್ಧವಾಗಿ ಅಲ್ಲಿನ ಮಹಿಳೆಯರು ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಮಧ್ಯೆ ಪಾದ್ರಿ ಸಯ್ಯದ್ ಯೂಸಫ್ ತಬತಬಿ ಈ ಹೇಳಿಕೆ ನೀಡಿದ್ದಾರೆ.
ಇವರ ಹೇಳಿಕೆಗೆ ಇರಾನ್ ನ ರಾಷ್ಟ್ರೀಯ ರೆಸಿಸ್ಟೆನ್ಸ್ನ ಕೌನ್ಸಿಲ್ ನಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇರಾನ್ ನ ಪ್ರಭುತ್ವಾತ್ಮಕ ಆಡಳಿತವನ್ನು ಇದು ತೋರಿಸುತ್ತಿದ್ದು, ಉಗ್ರಗಾಮಿ ಸಂಘಟನೆ ಐಸಿಸ್ ಸಂಸ್ಕೃತಿಗೆ ಭಿನ್ನವಾಗಿಲ್ಲ ಎಂದು ಹೇಳಿದೆ.

ಮಹಿಳೆಯರು ಮನೆಯಲ್ಲಿರಬೇಕು, ಪುರುಷರು ಹೊರಗೆ ಹೋಗಿ ದುಡಿಯಬೇಕು ಮತ್ತು ದೇಶದ ವಸ್ತ್ರ ಸಂಹಿತೆಯನ್ನು ಪಾಲಿಸದ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಇರಾನ್ ನ ನಿಯಮಕ್ಕೆ ಈ ಹಿಂದೆ ಇಮಾಮ್ ವಿರೋಧ ವ್ಯಕ್ತಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com