
ಬೀಜಿಂಗ್: ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ(ಎನ್ಎಸ್ ಜಿ) ಸಮೂಹಕ್ಕೆ ಭಾರತದ ಸದಸ್ಯತ್ವವನ್ನು ವಿರೋಧಿಸುತ್ತಿರುವ ಚೀನಾ ಈಗ ತನ್ನ ವಿರೋಧಕ್ಕೆ ಹೊಸ ಕಾರಣವನ್ನು ನೀಡಿದ್ದು ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡಿದರೆ ಪಾಕಿಸ್ತಾನವನ್ನು ಪ್ರಚೋದಿಸಿದಂತಾಗುತ್ತದೆ ಎಂದು ಎಚ್ಚರಿಸಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡಿದರೆ ಅದು ಭಾರತ-ಚೀನಾ- ಪಾಕಿಸ್ತಾನದ ಪ್ರದೇಶದಲ್ಲಿ ಪೈಪೋಟಿಕೆ ಕಾರಣವಾಗಿ ಅಣು ಘರ್ಷಣೆಗೆ ತಿರುಗಲಿದೆ ಎಂದು ವಿಶ್ಲೇಷಿಸಿದೆ.
ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳು ಅಣ್ವಸ್ತ್ರ ರಾಷ್ಟ್ರಗಳಾಗಿದ್ದು, ಪರಸ್ಪರ ನಿಗಾವಹಿಸಿವೆ. ಈ ಹಂತದಲ್ಲಿ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ನೀಡಿದರೆ ಪಾಕಿಸ್ತಾನ ಪ್ರಚೋದನೆಗೊಳಗಾಗಲಿದ್ದು ಇದರಿಂದ ಪ್ರಾದೇಶಿಕ ಭದ್ರತೆಗೆ ಅಪಾಯ ಎದುರಾಗಲಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. ಎನ್ಎಸ್ ಜಿ ಸದಸ್ಯತ್ವ ಪಡೆಯಲು ಯತ್ನಿಸುತ್ತಿರುವ ಭಾರತಕ್ಕೆ ತನ್ನದೇ ಆದ ಲೆಕ್ಕಾಚಾರಗಳಿದ್ದು, ಪ್ರಾದೇಶಿಕ ಪರಮಾಣು ಯೋಜನೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡುವ ಉದ್ದೇಶ ಹೊಂದಿದೆ ಎಂದು ಚೀನಾ ಹೇಳಿದೆ.
Advertisement