ಸಾಲಕ್ಕಾಗಿ ಬೆತ್ತಲೆ ಫೋಟೊ ಅಡ: ಇದು ಚೀನಾದಲ್ಲಿ ಚಾಲ್ತಿಯಲ್ಲಿರುವ ಅಶ್ಲೀಲ ಯೋಜನೆ!

ಚೀನಾದಲ್ಲಿ ಲೋನ್-ಫಾರ್ ಪೋರ್ನ್(ಸಾಲಕ್ಕಾಗಿ ನಗ್ನಚಿತ್ರ) ಎಂಬ ಅಶ್ಲೀಲ ಯೋಜನೆ ಚಾಲ್ತಿಯಲ್ಲಿದೆ.
ಸಾಲಕ್ಕಾಗಿ ಬೆತ್ತಲೆ ಫೋಟೊ ಅಡ: ಇದು ಚೀನಾದಲ್ಲಿ ಚಾಲ್ತಿಯಲ್ಲಿರುವ ಅಶ್ಲೀಲ ಯೋಜನೆ!
ಸಾಲಕ್ಕಾಗಿ ಬೆತ್ತಲೆ ಫೋಟೊ ಅಡ: ಇದು ಚೀನಾದಲ್ಲಿ ಚಾಲ್ತಿಯಲ್ಲಿರುವ ಅಶ್ಲೀಲ ಯೋಜನೆ!

ಬೀಜಿಂಗ್: ಚೀನಾದಲ್ಲಿ ಲೋನ್-ಫಾರ್ ಪೋರ್ನ್(ಸಾಲಕ್ಕಾಗಿ ನಗ್ನಚಿತ್ರ) ಎಂಬ ಅಶ್ಲೀಲ ಯೋಜನೆ ಚಾಲ್ತಿಯಲ್ಲಿದ್ದು, ಕಾಲೇಜು ವಿದ್ಯಾರ್ಥಿನಿಯರು ಸಾಲ ಪಡೆಯಬೇಕಾದರೆ ಅವರ ನಗ್ನ ಚಿತ್ರವನ್ನು ನೀಡಬೇಕಂತೆ, ಹಾಗೆ ಮಾಡಿದರೆ ಸಾಮಾನ್ಯವಾಗಿ ನೀಡುವುದಕ್ಕಿಂತ 2-ರಿಂದ 5 ಪಟ್ಟು ಹೆಚ್ಚು ಹಣ ನೀಡಲಾಗುತ್ತದೆ ಎಂಬ ವರದಿ ಪ್ರಕಟವಾಗಿದೆ.

ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮದಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದ್ದು ಈ ಅಶ್ಲೀಲ ಯೋಜನೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಲ ಮರುಪಾವತಿ ಮಾಡಲು ವಿದ್ಯಾರ್ಥಿನಿಯರು ವಿಫಲರಾದರೆ  ವೆಬ್ ಸೈಟ್ ಗಳಲ್ಲಿ ನಗ್ನ ಚಿತ್ರ ಹರಿಬಿಡುವ ಅಪಾಯವಿದೆ ಎಂದು ತಿಳಿದುಬಂದಿದೆ.
 
ಲೋನ್-ಫಾರ್-ಪೋರ್ನ್ ಯೋಜನೆಯಲ್ಲಿ ಚೀನಾದ ವೆಬ್ ಸೈಟ್ ಒಂದು ಭಾಗಿಯಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳದ ವೆಬ್ ನಿಯಂತ್ರಣ ಪ್ರಾಧಿಕಾರದ ವಿರುದ್ಧ ಸಾಮಾಜಿಕ ಜಾಲತಾಣ ವೈಬೋನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com