
ವಾಷಿಂಗ್ ಟನ್: ವಾಷಿಂಗ್ ಟನ್ ಪ್ರವಾಸದಲ್ಲಿರುವ ಟಿಬೇಟ್ ನ ಧರ್ಮ ಗುರು ದಲೈ ಲಾಮ, ಶ್ವೇತ ಭವನಕ್ಕೆ ಭೇಟಿ ನೀಡಲಿದ್ದು, ದಲೈಲಾಮ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ವಾಗತಿಸಲಿದ್ದಾರೆ.
ಅಮೆರಿಕ ಅಧ್ಯಕ್ಷರೊಂದಿಗೆ ದಲೈ ಲಾಮ ರಹಸ್ಯ ಮಾತುಕತೆ ನಡೆಸಿದ್ದು, ಮಾತುಕತೆಯನ್ನು ವರದಿ ಮಾಡಲು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡುವುದಕ್ಕೂ ಮುನ್ನ ಡೆಮಾಕ್ರೆಟಿಕ್, ರಿಪಬ್ಲಿಕನ್ ಪಕ್ಷದ ಕಾಂಗ್ರೆಸ್ ಸದಸ್ಯರನ್ನು ಭೇಟಿ ಮಾಡಿರುವ ದಲೈ ಲಾಮ, ಯುಎಸ್ ಇನ್ಸ್ ಟಿಟ್ಯೂಟ್ ಆಫ್ ಪೀಸ್ ನಲ್ಲಿ ಮಾತನಾಡಿದ್ದಾರೆ.
ದಲೈ ಲಾಮ ಅವರು ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ನಮ್ಮೆಲ್ಲರ ಜವಾಬ್ದಾರಿಗಳನ್ನು ನೆನಪಿಸಿದ್ದಾರೆ ಎಂದು ಡೆಮಾಕ್ರೆಟಿಕ್ ಪಕ್ಷದ ನಾಯಕ ನ್ಯಾನ್ಸಿ ಪಿಲೋಸಿ ಹೇಳಿಕೆ ನೀಡಿದ್ದಾರೆ. ಇನ್ನು ದಲೈ ಲಾಮ ಅವರು ಶ್ವೇತ ಭವನಕ್ಕೆ ಭೇಟಿ ನೀಡುತ್ತಿರುವ ಪರಿಣಾಮ ಚೀನಾಗೆ ಸಣ್ಣ ಪ್ರಮಾಣದಲ್ಲಿ ಆತಂಕ ಮೂಡಿದ್ದು, ಅಮೆರಿಕ ಬೆಂಬಲಿಸುತ್ತಿರುವ ಒಂದೇ ಚೀನಾ ನೀತಿಗೆ ಈ ಭೇಟಿಯಿಂದ ಧಕ್ಕೆ ಉಂಟಾಗಬಾರದು ಎಂದು ಎಚ್ಚರಿಸಿದೆ. ದಲೈ ಲಾಮ ಹಾಗೂ ಥೈವಾನ್ ನ ಅಧ್ಯಕ್ಷರು ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡುತ್ತಿದ್ದು, ಚೀನಾವನ್ನು ವಿಭಜಿಸುವ ಶಕ್ತಿಗಳಿಗೆ ಯಾವುದೇ ಸಕಾರಾತ್ಮಕ ಸಂದೇಶ ಹೋಗಬಾರದು ಎಂದು ಚೀನಾದ ವಿದೇಶಾಂಗ ಸಚಿವ ಲು-ಕಾಂಗ್ ಹೇಳಿಕೆ ನೀಡಿದ್ದಾರೆ.
Advertisement