ಚೈನಾ ಪ್ರವಾಹ ಮತ್ತು ಭೂಕುಸಿತಕ್ಕೆ ೧೪ ಬಲಿ

ಚೈನಾದ ಹಲೆವೆಡು ಉಂಟಾಗಿರುವ ಭಾರಿ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಿಂದಾಗಿ ಕನಿಷ್ಠ ೧೪ ಜನ ಮೃತಪಟ್ಟಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೀಜಿಂಗ್: ಚೈನಾದ ಹಲೆವೆಡು ಉಂಟಾಗಿರುವ ಭಾರಿ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಿಂದಾಗಿ ಕನಿಷ್ಠ ೧೪ ಜನ ಮೃತಪಟ್ಟಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ತೀವ್ರ ಮಳೆ ಮತ್ತು ಭೂಕುಸಿತದಿಂದ ಗ್ಯುಜೋ ಪ್ರಾಂತ್ಯದಲ್ಲಿ ೯ ಜನ ಮೃತಪಟ್ಟಿದ್ದಾರೆ ಎಂದು ಮಾಧ್ಯವೊಂದು ವರದಿ ಮಾಡಿದೆ.

೬೫,೬೦೦ ಜನರನ್ನು ಈ ಪ್ರಾಂತ್ಯದಿಂದ ಸ್ಥಳಾಂತರ ಮಾಡಿದ್ದು, ೯ ಜನ ಕಾಣೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಹುನಾನ್ ಪ್ರಾಂತ್ಯದಲ್ಲಿ ನಾಲ್ಕು ಜನ ಮೃತಪಟ್ಟಿದ್ದು, ೬ ಜನ ಕಾಣೆಯಾಗಿದ್ದಾರೆ. ೧,೫೭,೦೦೦ ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com