ಸರ್ಕಾರಿ ಔತಣಕೂಟಕ್ಕೆ ಇಸ್ಲಾಂ ಧರ್ಮಗುರು ಆಹ್ವಾನ: ಆಸ್ಟ್ರೇಲಿಯಾ ಪ್ರಧಾನಿ ವಿಷಾದ

ಇಸ್ಲಾಂ ನ ಧರ್ಮಗುರುವೊಬ್ಬರನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ಔತಣ ಕೂಟಕ್ಕೆ ಆಹ್ವಾನಿಸಿರುವುದಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್ ವಿಷಾದ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್
ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್

ಕ್ಯಾನ್ಬೆರಾ: ಸಲಿಂಗಕಾಮಿಗಳಿಗೆ ಏಡ್ಸ್ ರೋಗ ಸರಿಯಾದ ಶಿಕ್ಷೆ ಎಂದು ಹೇಳಿದ್ದ ಇಸ್ಲಾಂ ನ ಧರ್ಮಗುರುವೊಬ್ಬರನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ಔತಣ ಕೂಟಕ್ಕೆ ಆಹ್ವಾನಿಸಿರುವುದಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್ ವಿಷಾದ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ರೇಡಿಯೋದಲ್ಲಿ ಮಾತನಾಡಿರುವ ಮಾಲ್ಕಂ ಟರ್ನ್ಬುಲ್, ಮುಸ್ಲಿಂ ಧರ್ಮಗುರು ಶೇಖ್ ಶ್ಯಾಡಿ ಅಲ್-ಸುಲೇಮಾನ್ ಸಲಿಂಗಕಾಮಿಗಳ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿರುವುದನ್ನು ಖಂಡಿಸಿದ್ದಾರೆ. ಶೇಖ್ ಶ್ಯಾಡಿ ಅಲ್- ಸುಲೇಮಾನ್ ಅವರನ್ನು ರಂಜಾನ್ ಅಂಗವಾಗಿ ಆಯೋಜಿಸಲಾಗಿದ್ದ ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು.

ಸಲಿಂಗಕಾಮದ ಬಗ್ಗೆ ಇಸ್ಲಾಂ ನ ಧರ್ಮಗುರು ನೀಡಿರುವ ಹೇಳಿಕೆ ಔತಣಕೂಟಕ್ಕೆ ಆಹ್ವಾನಿಸುವುದಕ್ಕೂ ಹಿಂದಿನ ಘಟನೆಯಾಗಿದೆ. ಸಲಿಂಗಕಾಮದ ಬಗ್ಗೆ ಮಾತನಾಡಿದ್ದ ಸುಲೇಮಾನ್, ಸಲಿಂಗಕಾಮ ಎನ್ನುವುದು ಪಾಪಿಗಳು ನಡೆಸುವ ಕೃತ್ಯವಾಗಿದ್ದು ಇದರಿಂದ ಕೆಟ್ಟ ರೋಗ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದರು. ಸುಲೇಮಾನ್ ನೀಡಿರುವ ಈ ಹೇಳಿಕೆ ಬಗ್ಗೆ ತಮಗೆ ಮೊದಲೇ ಅವಿದಿದ್ದಿದ್ದರೆ ಅವರನ್ನು ಆಹ್ವಾನಿಸಲು ಒಪ್ಪುತ್ತಿರಲಿಲ್ಲ ಎಂದು ಟರ್ನ್ಬುಲ್ ಹೇಳಿದ್ದಾರೆ.

ಸಲಿಂಗಕಾಮಿಗಳ ಬಗ್ಗೆ ಇಸ್ಲಾಂ ಧರ್ಮಗುರು ನೀಡಿದ್ದ ಹೇಳಿಕೆ ಬಗ್ಗೆ ನನಗೆ ಮೊದಲೇ ತಿಳಿದಿದ್ದರೆ ಅವರನ್ನು ಆಹ್ವಾನಿಸುತ್ತಿರಲಿಲ್ಲ ಎಂದು ಟರ್ನ್ಬುಲ್ ರೇಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರಧಾನಿಯೊಬ್ಬರು ಮುಸ್ಲಿಮರಿಗೆ ರಂಜಾನ್ ಅಂಗವಾಗಿ ಸರ್ಕಾರದ ವತಿಯಿಂದ ಔತಣಕೂಟ( ಇಫ್ತಾರ್) ಕೂತವನು ಆಯೋಜಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com