ಜೋ ಕೋಕ್ಸ್ ಹತ್ಯೆ; ಜನಾಭಿಪ್ರಾಯ ಅಭಿಯಾನ ಮುಂದೂಡಿಕೆ

ಬ್ರಿಟನ್ ಲೇಬರ್ ಪಕ್ಷದ ಸಂಸದೆ ಜೋ ಕೋಕ್ಸ್ ಹತ್ಯೆ ಬೆನ್ನಲ್ಲೇ ಈ ವಾರ ನಡೆಯಬೇಕಿದ್ದ ಜನಾಭಿಪ್ರಾಯ ಅಭಿಯಾನವನ್ನು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.
ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ (ಸಂಗ್ರಹ ಚಿತ್ರ)
ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ (ಸಂಗ್ರಹ ಚಿತ್ರ)

ಲಂಡನ್: ಬ್ರಿಟನ್ ಲೇಬರ್ ಪಕ್ಷದ ಸಂಸದೆ ಜೋ ಕೋಕ್ಸ್ ಹತ್ಯೆ ಬೆನ್ನಲ್ಲೇ ಈ ವಾರ ನಡೆಯಬೇಕಿದ್ದ ಜನಾಭಿಪ್ರಾಯ ಅಭಿಯಾನವನ್ನು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಮುಂದೂಡಿದ್ದಾರೆ  ಎಂದು ತಿಳಿದುಬಂದಿದೆ.

ಇಂಗ್ಲೆಂಡ್ ದೇಶ ಐರೋಪ್ಯ ಒಕ್ಕೂಟದಲ್ಲೇ ಇರಬೇಕೆ ಅಥವಾ ಬೇಡವೇ ಎಂಬ ಬಗೆಗಿನ ಮಹತ್ವದ ನಿರ್ಧಾರ ಕೈಗೊಳ್ಳುವ ಕುರಿತು ಈ ವಾರ ಪ್ರಧಾನಿ ಡೇವಿಡ್ ಕೆಮರಾನ್ ಅಧ್ಯಕ್ಷತೆಯಲ್ಲಿ  ಸಭೆಗೆ ನಿರ್ಧರಿಸಲಾಗಿತ್ತು. ಆದರೆ ಇಂಗ್ಲೆಂಡ್ ದೇಶವನ್ನು ಐರೋಪ್ಯ ಒಕ್ಕೂಟದಲ್ಲೇ ಉಳಿಸುವುದಕ್ಕಾಗಿ ಹೋರಾಟ ನಡೆಸುತ್ತಿದ್ದ ಬ್ರಿಟನ್ ಎಂಪಿ ಜೋ ಕೋಕ್ಸ್​ ಅವರನ್ನೇ ಹತ್ಯೆ  ಗೈಯ್ಯಲಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಧಾನಿ ಕೆಮರಾನ್ ಮತದಾನ ಪ್ರಕ್ರಿಯೆಯನ್ನು ಮುಂದಿನ ವಾರಕ್ಕೆ ಮುಂದೂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಜೂನ್ 23ರಂದು ಮತದಾನ ನಡೆಯುವ ಸಾಧ್ಯತೆ ಇದೆ.

ಪ್ರಧಾನಿ ಡೇವಿಡ್ ಕೆಮರಾನ್ ಸಹ ಇಂಗ್ಲೆಂಡ್ ದೇಶ ಯೂರೋಪ್ ಒಕ್ಕೂಟದಲ್ಲಿಯೇ ಇರಿಸಲು ಬೆಂಬಲ ನೀಡಿದ್ದು, ನಿನ್ನೆ ಹತ್ಯೆಗೀಡಾದ ಸಂಸದೆ ಜೋ ಕೋಕ್ಸ್ ಈ ಬಗ್ಗೆ ತಮ್ಮ ಹೋರಾಟ ಮುಂದುವರೆಸಿದ್ದರು. ಇದೇ ಕಾರಣಕ್ಕಾಗಿ ನಿನ್ನೆ ಬ್ರಿಸ್ಟಾಲ್ ನ ಮತದಾರರೊಂದಿಗೆ ಸಭೆ ನಡೆಸಿದ್ದ ಕೋಕ್ಸ್ ಬಳಿಕ ವಾಪಸಾಗುವ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕೋಕ್ಸ್ ನಿಧನಕ್ಕೆ ಪ್ರಧಾನಿ ಕೆಮರಾನ್ ಸೇರಿದಂತೆ ಲೇಬರ್ ಪಕ್ಷದ ಸದಸ್ಯರು ಕಂಬನಿ ಮಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com