ವಿಶ್ವಾದ್ಯಂತ ಗರಿಗೆದರಿದ ಯೋಗ ಸಂಭ್ರಮ, 192 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ

2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವಾದ್ಯಂತ ವಿದ್ಯುಕ್ತ ಚಾಲನೆ ನೀಡಲಾಗಿದ್ದು, ವಿಶ್ವದ ಸುಮಾರು 192 ರಾಷ್ಟ್ರಗಳಲ್ಲಿ ಮಂಗಳವಾರ ಯೋಗದಿನ ಆಚರಿಸಲಾಗುತ್ತಿದೆ...
ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ಯೋಗ ಸಂಭ್ರಮ (ಸಂಗ್ರಹ ಚಿತ್ರ)
ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ಯೋಗ ಸಂಭ್ರಮ (ಸಂಗ್ರಹ ಚಿತ್ರ)

ನ್ಯೂಯಾರ್ಕ್: 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವಾದ್ಯಂತ ವಿದ್ಯುಕ್ತ ಚಾಲನೆ ನೀಡಲಾಗಿದ್ದು, ವಿಶ್ವದ ಸುಮಾರು 192 ರಾಷ್ಟ್ರಗಳಲ್ಲಿ ಮಂಗಳವಾರ ಯೋಗದಿನ ಆಚರಿಸಲಾಗುತ್ತಿದೆ.

ಅಮೆರಿಕ, ಇಂಗ್ಲೆಂಡ್, ಆಫ್ಘಾನಿಸ್ತಾನ ಸೇರಿದಂತೆ ಒಟ್ಟು ಸುಮಾರು 192 ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಯೋಗದಿನಕ್ಕೆ ಚಾಲನೆ ನೀಡಲಾಗಿದೆ. ಕಳೆದ ಜೂನ್ 21ರಂದು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿತ್ತು. ಅಲ್ಲದೆ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಣೆ ಮಾಡಿತ್ತು. ಅದರ ಫಲವಾಗಿ ಇಂದು ವಿಶ್ವಾದ್ಯಂತ 2ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಗುತ್ತಿದೆ.

ನ್ಯೂಯಾರ್ಕ್ ನಲ್ಲಿ ಕಿಕ್ಕಿರಿದ ಜನಸ್ತೋಮದಿಂದ ಯೋಗ
ಇನ್ನು ವಿಶ್ವದ ಅತ್ಯಂತ ಜನದಟ್ಟಣೆ ನಗರವೆಂದೇ ಖ್ಯಾತವಾದ ನ್ಯೂಯಾರ್ಕ್ ನ ಹೃದಯ ಭಾಗವಾದ ಟೈಮ್ಸ್ ಸ್ಕ್ವೇರ್​ನಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಯೋಗ ಮಾಡುವ ಮೂಲಕ ಯೋಗದಿನಕ್ಕೆ ಮೆರುಗು ತಂದರು. ವಿಶ್ವಸಂಸ್ಥೆ ನೀಡಿದ ಕರೆಗೆ ಮುಕ್ತವಾಗಿ ಸಂದಿಸಿದ ಮಹಾನಗರದ ಜನತೆ ಯೋಗದಿಂದ ಜೀವನ  ಸುಗಮ ಎಂಬ ಸಂದೇಶ ಸಾರಿದರು. ಯೋಗ ಶಿಕ್ಷಕರು ನೀಡಿದ ಸೂಚನೆಗೆ ಅನುಗುಣವಾಗಿ ಆಸನಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ವರ್ಷದ ಅತಿ ಸುದೀರ್ಘ ದಿನಕ್ಕೆ ಅಮೆರಿಕನ್ನರು  ಯೋಗಾಭ್ಯಾಸದ ಮೂಲಕ ಸ್ವಾಗತಿಸಿ, ಸಂಭ್ರಮಿಸಿದ್ದು ಗಮನ ಸೆಳೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com