

ಕರಾಚಿ : ಪಾಕಿಸ್ತಾನದ ಪ್ರಸಿದ್ದ ಕವ್ವಾಲಿ ಗಾಯಕ ಅಮ್ಜದ್ ಸಬ್ರಿ ಅವರನ್ನು ಲಿಕಾತಾಬಾದ್ ಎಂಬಲ್ಲಿ ಬುಧವಾರ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಕೊಂದಿದ್ದಾರೆ.
45 ವರ್ಷದ ಸಬ್ರಿ ಅವರು ತಮ್ಮ ಸ್ನೇಹಿತನ ಜತೆ ಕಾರಿನಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಅವರ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಸಬ್ರಿ ಜತೆ ಅವರ ಸ್ನೇಹಿತ ಮತ್ತು ಚಾಲಕ ಇದ್ದರು. ಘಟನೆಯಲ್ಲಿ ಮೂವರಿಗೂ ಗಂಭೀರ ಗಾಯಗಳಾಗಿದ್ದವು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರಗೆ ದಾಖಲಿಸಲಾಯಿತಾರೂ, ಮೂವರೂ ಆಸ್ಪತ್ರೆಯಲ್ಲಿ ಮೃತಪಟ್ಟರು. ಘಟನೆಗೆ ಕಾರಣ ತಿಳಿದುಬಂದಿಲ್ಲ ಎಂದು ಕರಾಚಿ ಪೊಲೀಸರು ಮಾಹಿತಿ ನೀಡಿದ್ದಾರೆ.