
ಲಂಡನ್: ಬ್ರೆಕ್ಸಿಟ್ ಜನಮತದಿಂದಾಗಿ ಇ೦ಗ್ಲೆ೦ಡ್ ಮೇಲೆ ಉ೦ಟಾದ ಪರಿಣಾಮದ ಬಗ್ಗೆ ಕುಖ್ಯಾತ ಇಸ್ಲಾಮಿಕ್ ಸ್ಟೇಟ್ ಉಗ್ರ ಸ೦ಘಟನೆ ಇಸಿಸ್ ಅತೀವ ಸಂತಸ ವ್ಯಕ್ತಪಡಿಸಿದೆ.
ಶುಕ್ರವಾರ ನಡೆದ ಬ್ರೆಕ್ಸಿಟ್ ಮತ ಎಣಿಕೆ ಪ್ರಕ್ರಿಯೆ ಬಳಿಕ ವಿಶ್ವ ಮಾರುಕಟ್ಟೆ ತಲ್ಲಣಿಸಿದ್ದು, ಬರೊಬ್ಬರಿ 2 ಟ್ರಿಲಯನ್ ಡಾಲರ್ ನಷ್ಟವಾಗಿತ್ತು. ಇದರ ಬೆನ್ನಲ್ಲೇ ಇರಾಕ್ ಮತ್ತು ಸಿರಿಯಾದಲ್ಲಿ ಪ್ರಾಬಲ್ಯ ಸಾಧಿಸಿರುವ ಕುಖ್ಯಾತ ಉಗ್ರ ಸಂಘಟನೆ ಇಸಿಸ್ ಬ್ರಸೆಲ್ಸ್ ಮತ್ತು ಬಲಿ೯ನ್‍ನಲ್ಲಿ ದಾಳಿ ಮಾಡಲು ತನ್ನ ಉಗ್ರ ಪಡೆಗೆ ಕರೆ ಕೊಟ್ಟಿದೆ. ಬ್ರೆಕ್ಸಿಟ್ ಜನಮತ ಕುರಿತು ಸಂದೇಶ ರವಾನಿಸಿರುವ ಇಸಿಸ್ ಬ್ರೆಕ್ಸಿಟ್ ಜನಮತದಿಂದ ಯೂರೋಪಿಯನ್ ಒಕ್ಕೂಟ ದುರ್ಬಲವಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಯುರೋಪ್ ಶಕ್ತಿಹೀನವಾಗುತ್ತಿದ್ದು, ಅದರ ವಿರುದ್ಧ ಯುದ್ಧ ಮಾಡಲು ಇದು ಸರಿಯಾದ ಸಂದರ್ಭ ಎಂದು ಇಸಿಸ್ ತನ್ನ ಉಗ್ರರಿಗೆ ಹೇಳಿದೆ.
ಅತ್ತ ಇಸಿಸ್ ಉಗ್ರ ಸಂಘಟನೆ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಇತ್ತ ಎಚ್ಚೆತ್ತಿರುವ ಬ್ರಿಟನ್ ಇಂಗ್ಲೆಂಡ್ ಗೆ ದಾಳಿ ಭೀತಿ ಇದೆ ಎಂದು ಹೇಳಿದೆ. ಈ ಬಗ್ಗೆ ಇಂಗ್ಲೆಂಡ್ ಸೇನಾ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದು, ಕಟ್ಟೆಚ್ಚರದಿಂದ ಇರುವಂತೆ ಸೇನೆಗೆ ಆದೇಶಿಸಿದ್ದಾರೆ.
ಇನ್ನು ಸ್ಲೊವಾಕಿಯಾ ಹೊಣೆಗಾರಿಕೆ ಯುರೋಪ್ ಒಕ್ಕೂಟದ ಅಧ್ಯಕ್ಷ ಸ್ಥಾನ ಆರು ತಿ೦ಗಳ ಪಯಾ೯ಯ ರೂಪದ್ದಾಗಿದ್ದು, ಜೂನ್ 30ಕ್ಕೆ ನೆದರ್‍ಲೆ೦ಡ್ ಅಧಿಕಾರಾವಧಿ ಮುಗಿದು, ಯೂನಿಯನ್ ನಾಯಕತ್ವದ ಹೊಣೆಗಾರಿಕೆ ಜುಲೈ 1ರಿ೦ದ ಆರು ತಿ೦ಗಳು ಅನನುಭವಿ ಸ್ಲೊವಾಕಿಯಾದ ಹೆಗಲೇರಲಿದೆ. ಬ್ರೆಕ್ಸಿಟ್ ಸಮಾವೇಶ 28, 29ಕ್ಕೆ ಬ್ರುಸೆಲ್ಸ್ ನಲ್ಲಿ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಸೇರಿ ಯುರೋಪಿಯನ್ ಯೂನಿಯನ್‍ನ 28 ರಾಷ್ಟ್ರಗಳ ನಾಯಕರು ಸಭೆ ಸೇರಲಿದ್ದು, ಬ್ರಿಟನ್ ಜನಾದೇಶದ ಫಲಿತಾ೦ಶ ಹಾಗೂ ಅದರ ಪರಿಣಾಮಗಳ ಕುರಿತು ಚಚಿ೯ಸಲಿದ್ದಾರೆ.
ವಾಸ್ತವದಲ್ಲಿ ಈ ಸಭೆ ಜೂನ್ 23ಕ್ಕೆ ನಿಗದಿಯಾಗಿತ್ತು. ಅದೇ ದಿನ ರೆಫರೆ೦ಡ೦ ಘೋಷಣೆಯಾದ ಹಿನ್ನೆಲೆಯಲ್ಲಿ ಒ೦ದು ವಾರ ಮು೦ದೂಡಲಾಗಿತ್ತು.
Advertisement