ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈ ತಪ್ಪಿದ್ದನ್ನು ಸ್ವಾಗತಿಸಿದ ಯುಎಸ್ ಸಂಸದ!

ಭಾರತಕ್ಕೆ ಪರಮಾಣು ಪೂರೈಕೆದಾರರ ಒಕ್ಕೂಟದ ಸದಸ್ಯತ್ವ ನೀಡುವ ಬಗ್ಗೆ ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳು ಯಾವುದೇ ತೀರ್ಮಾನ ಕೈಗೊಳ್ಳದೇ ಇರುವುದನ್ನು ಅಮೆರಿಕದ ಸಂಸದ ಎಡ್ವರ್ಡ್ ಮಾರ್ಕೆ ಸ್ವಾಗತಿಸಿದ್ದಾರೆ.
ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈ ತಪ್ಪಿದ್ದನ್ನು ಸ್ವಾಗತಿಸಿದ ಯುಎಸ್ ಸಂಸದ!

ವಾಷಿಂಗ್ ಟನ್: ಭಾರತಕ್ಕೆ ಪರಮಾಣು ಪೂರೈಕೆದಾರರ ಒಕ್ಕೂಟದ ಸದಸ್ಯತ್ವ ನೀಡುವ ಬಗ್ಗೆ ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳು ಯಾವುದೇ ತೀರ್ಮಾನ ಕೈಗೊಳ್ಳದೇ ಇರುವುದನ್ನು ಅಮೆರಿಕದ ಸಂಸದ ಎಡ್ವರ್ಡ್ ಮಾರ್ಕೆ ಸ್ವಾಗತಿಸಿದ್ದಾರೆ.

ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡದೆ ಇರುವುದರ ಮೂಲಕ ಎನ್ಎಸ್ ಜಿ ರಾಷ್ಟ್ರಗಳು ಎನ್ ಪಿಟಿಗೆ ನೀಡುವ ಬೆಂಬಲವನ್ನು ಸ್ಪಷ್ಟಪಡಿಸಿವೆ ಎಂದು ಜೂನಿಯರ್ ಡೆಮಾಕ್ರೆಟಿಕ್ ನ ಸಂಸದ ಎಡ್ವರ್ಡ್ ಮಾರ್ಕೆ ಅಭಿಪ್ರಾಯಪಟ್ಟಿದ್ದಾರೆ.

ಭಾರತ 1974 ರಲ್ಲಿ ಪರಮಾಣು ಪರೀಕ್ಷೆ ಮಾಡಿದ್ದರ ಪರಿಣಾಮವಾಗಿ ಅಣ್ವಸ್ತ್ರ ಪ್ರಸಾರಣವನ್ನು ತಡೆಯುವುದಕ್ಕಾಗಿಯೇ ಎನ್ ಎಸ್ ಜಿ ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಒಂದು ವೇಳೆ ಭಾರತವೇನಾದರೂ ಎನ್ ಎಸ್ ಜಿ ಸದಸ್ಯತ್ವ ಪಡೆದಿದ್ದರೆ, ಎನ್ ಎಸ್ ಜಿ ಸಮೂಹದಲ್ಲಿ ಎನ್ ಪಿಟಿ ಸಹಿ ಹಾಕದ ಏಕೈಕ ರಾಷ್ಟ್ರವಾಗಿ ಭಾರತ ಉಳಿಯುತ್ತಿತ್ತು. ಇದು ಎನ್ ಎಸ್ ಜಿಯನ್ನು ದುರ್ಬಲಗೊಳಿಸುತ್ತಿತ್ತು ಎಂದು ಎಡ್ವಾರ್ಡ್ ಮಾರ್ಕೆ ಹೇಳಿದ್ದಾರೆ.ಭಾರತಕ್ಕೆ ಎನ್ ಎಸ್  ಜಿ ಸದಸ್ಯತ್ವ ಕೈತಪ್ಪಿದ್ದನ್ನು ಸ್ವಾಗತಿಸಿರುವ ಎಡ್ವಾರ್ಡ್ ಮಾರ್ಕೆ ಈ ಹಿಂದೆಯೂ ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡುವುದನ್ನು ವಿರೋಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com