

ಹನೋಯಿ: ವಿಶ್ವವಿಖ್ಯಾತ ತಾಜ್ ಮಹಲ್ ಏಷ್ಯಾದ 50 ಅತ್ಯಂತ ಸುಂದರ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕೊಂಡೆ ನಾಸ್ಟ್ ಟ್ರಾವೆಲರ್ (ಸಿಎನ್ ಟಿ) ನಿಯತಕಾಲಿಕೆ ಪ್ರಕಟವಾಗಿರುವ ವರದಿಯ ಪ್ರಕಾರ 17 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ತಾಜ್ ಮಹಲ್ ಏಷ್ಯಾದ 50 ಅತ್ಯಂತ ಸುಂದರ ತಾಣಗಳಲ್ಲಿ ಒಂದು ಎಂದು ಹೇಳಿದೆ.
ತಾಜ್ ಮಹಲ್ ಭಾರತದಲ್ಲಿ ಅತ್ಯಂತ ಹೆಚ್ಚು ಸಂದರ್ಶಿಸಲ್ಪಟ್ಟ ತಾಣವಾಗಿದೆ ಎಂದು ಸಿಎನ್ ಟಿ ನಿಯತಕಾಲಿಕೆ ಪ್ರಕಟವಾಗಿರುವ ವರದಿ ಮೂಲಕ ತಿಳಿದುಬಂದಿದೆ. ಏಷ್ಯಾದ ಉಳಿದ 50 ಅತ್ಯಂತ ಸುಂದರ ತಾಣಗಳ ಪಟ್ಟಿಯಲ್ಲಿ ಚೀನಾದ ಬೀಜಿಂಗ್, ಗ್ರೇಟ್ ವಾಲ್ ಆಫ್ ಚೀನಾ ಟಿಬೇಟ್ ನ ಲ್ಹಾಸಾ ಸಹ ಇದೆ.