ಯಾರಿಗೂ ಬೇಡವಾಯ್ತು ಪ್ರಪಂಚದ ಅತಿ ದೊಡ್ಡ ವಜ್ರ!

ಪ್ರಪಂಚದ ಅತಿದೊಡ್ಡ ಕತ್ತರಿಸದ ವಜ್ರ ಯಾರಿಗೂ ಬೇಡವಾಗಿದೆ. ಬುಧವಾರ ನಡೆದ ಹರಾಜಿನಲ್ಲಿ ಈ ವಜ್ರವನ್ನು ಯಾರೊಬ್ಬರು ಕೊಳ್ಳಲು ಮುಂದೆ ಬಂದಿಲ್ಲ...
ಲಿಸೇಡಿ ಲಾ ರೋನಾ ವಜ್ರ
ಲಿಸೇಡಿ ಲಾ ರೋನಾ ವಜ್ರ

ಲಂಡನ್: ಪ್ರಪಂಚದ ಅತಿದೊಡ್ಡ ಕತ್ತರಿಸದ ವಜ್ರ ಯಾರಿಗೂ ಬೇಡವಾಗಿದೆ. ಬುಧವಾರ ನಡೆದ ಹರಾಜಿನಲ್ಲಿ ಈ ವಜ್ರವನ್ನು ಯಾರೊಬ್ಬರು ಕೊಳ್ಳಲು ಮುಂದೆ ಬಂದಿಲ್ಲ.

ಕೆನಡಾ ಮೂಲದ ಲುಕಾರ್ ಡೈಮಂಡ್ ಕಾರ್ಪೋರೇಷನ್ ಮಾರಾಟಕ್ಕಿಟ್ಟಿದ್ದ ಲಿಸೇಡಿ ಲಾ ರೋನಾ ವಜ್ರವನ್ನು ಲಂಡನ್ ನಲ್ಲಿ ಹರಾಜಿಗೆ ಇಡಲಾಗಿತ್ತು. ಆದರೆ ಯಾರೊಬ್ಬರು ಇದನ್ನು ಕೊಳ್ಳಲು ಮುಂದೆ ಬಂದಿಲ್ಲ.

ಟೆನ್ನಿಸ್ ಬಾಲ್ ಗಾತ್ರವಿರುವ ಈ ವಜ್ರ 1.109 ಕ್ಯಾರೆಟ್ ತೂಕವಿದೆ. 2.5 ಬಿಲಿಯನ್ ವರ್ಷದಷ್ಟು ಹಳೇಯದಾಗಿರುವ ಈ ವಜ್ರವನ್ನು 52 ಮಿಲಿಯನ್ ಪೌಂಡ್ ಗೆ ಬಿಕರಿಯಾಗುವುದೆಂದು ಅಂದಾಜಿಲಾಗಿತ್ತು.

ಕಳೆದ ನವೆಂಬರ್ ನಲ್ಲಿ ಬೊಟ್ಸ್ವಾನಾದಲ್ಲಿ ಗಣಿಗಾರಿಕೆಯಲ್ಲಿ ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com