ನೀನು ನನ್ನನ್ನು ತೊರೆದರೆ ವಿಮಾನವನ್ನೇ ಪತನಗೊಳಿಸುತ್ತೇನೆ: ಪೈಲಟ್ ಹುಚ್ಚಾಟ, ಪ್ರಯಾಣಿಕರಿಗೆ ಸಂಕಟ

ನೀನು ನನ್ನನ್ನು ಬಿಟ್ಟು ಹೋದಲ್ಲಿ ನನ್ನನ್ನು ನಾನು ಹತ್ಯೆ ಮಾಡಿಕೊಳ್ಳುವುದಲ್ಲದೇ ರೋಮ್‌ನಿಂದ ಜಪಾನ್‌ಗೆ ತೆರಳುತ್ತಿರುವ 200 ಪ್ರಯಾಣಿಕರರಿರುವ ವಿಮಾನವನ್ನು ..,.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬರ್ಲಿನ್: ನೀನು ನನ್ನನ್ನು ಬಿಟ್ಟು ಹೋದಲ್ಲಿ ನನ್ನನ್ನು ನಾನು ಹತ್ಯೆ ಮಾಡಿಕೊಳ್ಳುವುದಲ್ಲದೇ ರೋಮ್‌ನಿಂದ ಜಪಾನ್‌ಗೆ ತೆರಳುತ್ತಿರುವ 200 ಪ್ರಯಾಣಿಕರರಿರುವ ವಿಮಾನವನ್ನು ಅಪಘಾತಕ್ಕೀಡು ಮಾಡುವುದಾಗಿ ಪೈಲಟ್ ತನ್ನ ಹೆಂಡತಿಗೆ ಬೆದರಿಕೆಯೊಡ್ಡಿ ಸಂದೇಶ ಕಳುಹಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

40 ವರ್ಷದ ಇಟಲಿ ಮೂಲದ ಪೈಲಟ್ ತನ್ನ ಪತ್ನಿಗೆ ಕಳೆದ ವರ್ಷ ಜನವರಿಯಲ್ಲಿ ಈ ರೀತಿಯ ಸಂದೇಶ ರವಾನಿಸಿದ್ದ. ನೀನು ನನ್ನನ್ನು ತೊರೆದು ಹೋದಲ್ಲಿ ಜಪಾನ್‌ಗೆ ತೆರಳುತ್ತಿರುವ ವಿಮಾನದಲ್ಲಿ 200 ಪ್ರಯಾಣಿಕರಿದ್ದು, ವಿಮಾನವನ್ನು ಅಪಘಾತಕ್ಕೀಡು ಮಾಡುವ ಬೆದರಿಕೆಯೊಡ್ಡಿದ್ದ ಎಂದು ವರದಿ ಮಾಡಲಾಗಿದೆ.

ಕೂಡಲೇ ಪೈಲಟ್‌ನ ಪತ್ನಿ ತನ್ನ ಪತಿಯ ಸಂದೇಶವನ್ನು ಪೊಲೀಸರಿಗೆ ರವಾನಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಳು. ರೋಮ್‌ನಿಂದ ವಿಮಾನ ಹಾರುವ ಮೊದಲೇ ಪೊಲೀಸರು ಆರೋಪಿ ಪೈಲಟ್‌ನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿ ದೊಡ್ಡ ದುರಂತದಿಂದ ಪಾರು ಮಾಡಿದ್ದಾರೆ.

ಮತ್ತೊಬ್ಬ ಪೈಲಟ್‌ಗೆ ವಿಮಾನದ ಹೊಣೆಯನ್ನು ವಹಿಸಿ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಯಿತು. ಇಲ್ಲಿಯವರೆಗೆ ಘಟನೆಯ ಬಗ್ಗೆ ರಹಸ್ಯವಾಗಿಡಲಾಗಿತ್ತು ಎಂದು ವರದಿ ತಿಳಿಸಿದೆ. ಪೈಲಟ್‌ನ ದೌರ್ಜನ್ಯದ ಬಗ್ಗೆ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದಳು. ಆದ್ದರಿಂದ, ದೂರು ಆಧರಿಸಿ ಕೆಲ ದಿನಗಳವರೆಗೆ ಪೈಲಟ್‌ನನ್ನು ಅಮಾನತ್ತುಗೊಳಿಸಿ, ಮಾನಸಿಕ ತಜ್ಞರಿಂದ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com