
ಹಿಲ್ಲಾ: ದಕ್ಷಿಣ ಬಾಗ್ದಾದ್ ನ ಇಸ್ಕಾನ್ದರಿಯಾ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಸಂಘಟನೆಯ ಉಗ್ರರು ಅತ್ಯಹತ್ಯಾ ಬಾಂಬ್ ಸ್ಫೋಟಿಸಿದ್ದು, ಪರಿಣಾಮ 30 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ ಎಂದು ತಿಳಿದುಬಂದಿದೆ.
ನಿನ್ನೆ ಇಸ್ಕಾನ್ದರಿಯಾ ನಗರದಲ್ಲಿ ಸ್ಥಳೀಯರು ಫುಟ್ ಬಾಲ್ ಆಡುತ್ತಿದ್ದರು. ಆಟ ಮುಗಿದ ನಂತರ ಅಲ್ಲಿನ ನಗರದ ಮೇಯರ್ ಸೇರಿ ಇನ್ನಿತರೆ ಅಧಿಕಾರಿಗಳು ಗೆದ್ದ ತಂಡಕ್ಕೆ ಪ್ರಶಸ್ತಿಯನ್ನು ನೀಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ತಾನು ತೊಟ್ಟಿದ್ದ ಬಾಂಬ್'ನ್ನು ಇದ್ದಕ್ಕಿದ್ದಂತೆ ಸ್ಫೋಟಿಸಿಕೊಂಡಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ವೇಳೆ ಮೇಯರ್ ಸೇರಿದಂತೆ 30 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆಯನ್ನು ಇಸಿಸ್ ಹೊತ್ತುಕೊಂಡಿದೆ.
Advertisement