ಪನಾಮ ಪೇಪರ್ಸ್: ಐಸಿಐಜಿ ಹೊಸ ಮಾಹಿತಿಯಲ್ಲಿ ಸುಮಾರು 2 ಸಾವಿರ ಭಾರತೀಯ ಸಂಪರ್ಕ

ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ(ಐಸಿಐಜೆ)ಯ ಪನಾಮ ಪೇಪರ್ಸ್ ನ ಹೊಸ ಮಾಹಿತಿಯನ್ನು ಬಹಿರಂಗೊಳಿಸಿದ್ದು...
ಪನಾಮಾ ಮೂಲದ ಮೊಸಾಕ್ ಫೋನ್ಸೆಕಾ ಕಾನೂನು ಸಲಹಾ ಸಂಸ್ಥೆ
ಪನಾಮಾ ಮೂಲದ ಮೊಸಾಕ್ ಫೋನ್ಸೆಕಾ ಕಾನೂನು ಸಲಹಾ ಸಂಸ್ಥೆ
ನವದೆಹಲಿ: ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ(ಐಸಿಐಜೆ)ಯ ಪನಾಮ ಪೇಪರ್ಸ್ ನ ಹೊಸ ಮಾಹಿತಿಯನ್ನು ಬಹಿರಂಗೊಳಿಸಿದ್ದು, ಅದರಲ್ಲಿ ಸುಮಾರು 2 ಸಾವಿರ ಭಾರತೀಯ ಸಂಪರ್ಕದ ಬಗ್ಗೆ ದಾಖಲೆಗಳನ್ನು ಬಿಡುಗಡೆಗೊಳಿಸಲಾಗಿದೆ. 
ಐಸಿಐಜೆ ಹೊಸ ಮಾಹಿತಿಯಲ್ಲಿ ಪನಾಮಾ ಮೂಲದ ಮೊಸಾಕ್ ಫೋನ್ಸೆಕಾ ಕಾನೂನು ಸಲಹಾ ಸಂಸ್ಥೆಯು ಸುಮಾರು 2000 ಭಾರತೀಯ ಸಂಪರ್ಕ ಹೊಂದಿದೆ. ಅದರಲ್ಲಿ ವ್ಯಕ್ತಿಗಳು, ಸಂಸ್ಥೆಗಳು ಮತ್ತು ವಿಳಾಸಗಳು ಸೇರ್ಪಡೆಗೊಂಡಿದೆ ಎಂದು ಹೇಳಲಾಗಿದೆ. 
ಪನಾಮದಲ್ಲಿ ವಿಶ್ವದ ಸುಮಾರು 214,000 ಕಂಪನಿಗಳು ಸಂಪರ್ಕ ಹೊಂದಿದೆ. ಆ ಕಂಪನಿಗಳು ಮತ್ತು ಅದರ ಹಿಂದಿರುವ ವ್ಯಕ್ತಿಗಳನ್ನೊಳಗೊಂಡ ದಾಖಲೆಗಳನ್ನು ಐಸಿಐಜೆ ಬಿಡುಗಡೆಗೊಳಿಸಿದೆ. 
ಇನ್ನು 22 ಭಾರತೀಯ ಸಂಸ್ಥೆಗಳು, 1,046 ಅಧಿಕಾರಿಗಳು ಅಥವಾ ವ್ಯಕ್ತಿಗಳು, 42 ಮಧ್ಯವರ್ತಿಗಳು ಮತ್ತು ಭಾರತದೊಳಗಿರುವ 828 ವಿಳಾಸಗಳ ಮಾಹಿತಿಯನ್ನು ಬಹಿರಂಗಗೊಳಿಸಲಾಗಿದೆ. ಅದರಲ್ಲಿ ಮುಂಬೈ, ದೆಹಲಿ, ಕೋಲ್ಕತಾ ಮತ್ತು ಚೆನ್ನೈ, ಹರಿಯಾಣ ಸಿರ್ಸಾ, ಬಿಹಾರದ ಮುಜಾಫರ್ ನಗರ್, ಮದ್ಯಪ್ರದೇಶದ ಮಂಡಾಸುರ್ ಮತ್ತು ಬೋಪಾಲ್ ರಾಜಧಾನಿಯ ವಿಳಾಸಗಳು ಇವೆ ಎಂದು ತಿಳಿದು ಬಂದಿದೆ.
ಐಸಿಐಜೆ ಪನಾಮಾ ಮೂಲದ ಮೊಸಾಕ್ ಫೋನ್ಸೆಕಾ ಕಾನೂನು ಸಲಹಾ ಸಂಸ್ಥೆಯ 1.15 ಕೋಟಿ ದಾಖಲೆಪತ್ರಗಳನ್ನು ಬಹಿರಂಗಪಡಿಸಿತ್ತು. ತೆರಿಗೆ ರಹಿತ ದೇಶಗಳಲ್ಲಿ ಕಂಪನಿಗಳ್ನು ಸ್ಥಾಪಿಸುವ ಮೂಲಕ ಶ್ರೀಮಂತರ ಸಂಪತ್ತನ್ನು ಸಂರಕ್ಷಿಸಡಲು ಈ ಸಂಸ್ಥೆ ನೆರವಾಗುತ್ತಿದೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com