ಬಾಗ್ದಾದ್ ನಲ್ಲಿ ಕಾರ್ ಬಾಂಬ್ ಸ್ಫೋಟ: 50 ಸಾವು

ಆಫ್ಘಾನಿಸ್ತಾನದ ಬಾಗ್ದಾದ್ ನ ಸದ್ರ್ ನಗರದ ಮಾರುಕಟ್ಟೆಯಲ್ಲಿ ಬುಧವಾರ ಕಾರು ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ...
ಸ್ಫೋಟದ ನಡೆದ ಸ್ಥಳ
ಸ್ಫೋಟದ ನಡೆದ ಸ್ಥಳ
ಬಾಗ್ದಾದ್: ಆಫ್ಘಾನಿಸ್ತಾನದ ಬಾಗ್ದಾದ್ ನ ಸದ್ರ್ ನಗರದ ಮಾರುಕಟ್ಟೆಯಲ್ಲಿ ಬುಧವಾರ ಕಾರು ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಬಾಗ್ದಾದ್ ಪೊಲೀಸ್ ಹಾಗೂ ಆಸ್ಪತ್ರೆ ಮೂಲಗಳು ತಿಳಿಸಿವೆ,
ಇಂದು ಮಧ್ಯಾಹ್ನ ಶಿಯಾ ಮುಸ್ಲಿಮರು ಹೆಚ್ಚಾಗಿರುವ ಬಾಗ್ದಾದ್ ಜಿಲ್ಲೆಯ ಸದ್ರ್ ನಗರದ ಮಾರುಕಟ್ಟೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಐಎಸ್ಐಎಸ್ ಸ್ಫೋಟದ ಹೊಣೆ ಹೊತ್ತುಕೊಂಡಿದೆ.
ಮೃತಪಟ್ಟವರ ಪೈಕಿ ಹೆಚ್ಚಿನವರು ಮಹಿಳೆಯರೇ ಆಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಫೋಟಕ ತುಂಬಿದ ಎಸ್ ಯುವಿ ಕಾರನ್ನು ಬ್ಯೂಟಿ ಸಲೂನ್ ಗೆ ನುಂಗಿಸಿ ಸ್ಫೋಟಿಸಲಾಗಿದೆ. ಶಿಯಾ ಯೋಧರನ್ನು ಗುರಿಯಾಗಿಸಿಕೊಂಡು ಐಎಸ್ಐಎಸ್  ಆತ್ಮಾಹುತಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com