ಇಸಿಸ್ ಗೆ ಸೆಡ್ಡು ಹೊಡೆಯಲು ಅಲ್ ಖೈದಾ ತಯಾರಿ; ಸಿರಿಯಾದತ್ತ ಉಗ್ರ ಪಡೆ ರವಾನೆ

ಒಸಾಮಾ ಬಿನ್ ಲಾಡೆನ್ ಸಾವು ಮತ್ತು ಅಮೆರಿಕದ ಡ್ರೋನ್ ದಾಳಿ ಪರಿಣಾಮದಿಂದಾಗಿ ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯಲ್ಲಿ ಅಸ್ವಿತ್ವ ಕಳೆದುಕೊಂಡಿರುವ ಅಲ್ ಖೈದಾ ಉಗ್ರ ಸಂಘಟನೆ ಇದೀಗ ತನ್ನ..
ಅಲ್ ಖೈದಾ ಮುಖ್ಯಸ್ಥ ಅಯ್ಮಲ್ ಅಲ್ ಜವಹರಿ ಮತ್ತು ಇಸಿಸ್ (ಸಂಗ್ರಹ ಚಿತ್ರ)
ಅಲ್ ಖೈದಾ ಮುಖ್ಯಸ್ಥ ಅಯ್ಮಲ್ ಅಲ್ ಜವಹರಿ ಮತ್ತು ಇಸಿಸ್ (ಸಂಗ್ರಹ ಚಿತ್ರ)
Updated on: 

ವಾಷಿಂಗ್ಟನ್: ಒಸಾಮಾ ಬಿನ್ ಲಾಡೆನ್ ಸಾವು ಮತ್ತು ಅಮೆರಿಕದ ಡ್ರೋನ್ ದಾಳಿ ಪರಿಣಾಮದಿಂದಾಗಿ ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯಲ್ಲಿ ಅಸ್ವಿತ್ವ ಕಳೆದುಕೊಂಡಿರುವ ಅಲ್ ಖೈದಾ ಉಗ್ರ  ಸಂಘಟನೆ ಇದೀಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ವಿಶ್ವದ ಶ್ರೀಮಂತ ಉಗ್ರಸಂಘಟನೆ ಇಸಿಸ್ ಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.

ಮೂಲಗಳ ಪ್ರಕಾರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ತನ್ನ ಅಸ್ಥಿತ್ವ ಕಳೆದುಕೊಂಡಿರುವ ಅಲ್ ಖೈದಾ, ಇದೀಗ ಸಿರಿಯಾದತ್ತ ಮುಖಮಾಡಿದೆ. ವಿಶ್ವದ ಪ್ರಮುಖ ದೇಶಗಳ ನಿದ್ದೆಗೆಡಿಸಿರುವ  ಇಸಿಸ್ ಉಗ್ರಗಾಮಿ ಸಂಘಟನೆಯ ವಿರುದ್ಧವಾಗಿ ಕಾರ್ಯಾಚರಣೆ ಮಾಡುವ ಮೂಲಕ ಮತ್ತೆ ತನ್ನ ಗತಕಾಲದ ವೈಭವವನ್ನು ಮರಳಿ ಪಡೆಯಲು ಅಲ್ ಖೈದಾ ಸಂಘಟನೆ ಪ್ರಯತ್ನಿಸುತ್ತಿದೆ ಎಂದು  ಭದ್ರತಾ ಸಂಸ್ಥೆಗಳು ತಿಳಿಸಿವೆ.

ಅಮೆರಿಕದ ಭದ್ರತಾ ಮೂಲಗಳ ಪ್ರಕಾರ ಈಗಾಗಲೇ ಅಲ್ ಖೈದಾ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಲವು ಯೋಜನೆಗಳನ್ನು ರೂಪಿಸಿದ್ದು, ಇದರ ಮೊದಲ ಹಂತವಾಗಿ ಪ್ರಸ್ತುತ ಇಡೀ ವಿಶ್ವದ  ಭೀತಿಗೆ ಕಾರಣವಾಗಿರುವ ಇಸಿಸ್ ಉಗ್ರಗಾಮಿ ಸಂಘಟನೆ ವಿರುದ್ಧವಾಗಿ ಕಾರ್ಯಾಚರಣೆ ಮಾಡುವ ಮೂಲಕ ಅದರ ಪ್ರಾಬಲ್ಯವಿರುವ ಸಿರಿಯಾದ ಪ್ರದೇಶಗಳನ್ನು ವಶಪಡಿಸಿಕೊಳ್ಳಬೇಕು ಮತ್ತು ಆ ಮೂಲಕ ತನ್ನ ಅಸ್ಥಿತ್ವವನ್ನು ಇಡೀ ವಿಶ್ವಕ್ಕೆ ಪ್ರದರ್ಶನ ಮಾಡಬೇಕು ಎನ್ನುವುದು ಅಲ್ ಖೈದಾದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಈಗಾಗಲೇ ಅಲ್ ಖೈದಾ ಸಂಘಟನೆ ತನ್ನ ಉಗ್ರಪಡೆಯ ಕುಖ್ಯಾತ ಉಗ್ರರನ್ನು ಸಿರಿಯಾಗೆ ಕಳುಹಿಸಿದ್ದು, ಐಸಿಸ್‌ಗೆ ಎದುರಾಳಿಯಾಗಿ ಪ್ರಮುಖ ಪ್ರದೇಶಗಳಲ್ಲಿ ಪ್ರಭಾವ ಹೆಚ್ಚಿಸುವ ಟಾರ್ಗೆಟ್ ನೀಡಲಾಗಿದೆ.

ಆದರೆ ಐಸಿಸ್‌ಗೆ ಹೋಲಿಸಿದಲ್ಲಿ ಸಿರಿಯಾದಲ್ಲಿ ಅಲ್‌ಖೈದಾಕ್ಕೆ ಬಲ ತೀರಾ ಕಡಿಮೆ ಇದ್ದು, ಐಸಿಸ್ ಸಂಘಟನೆ ಸುಮಾರು 25 ಸಾವಿರ ಉಗ್ರರನ್ನು ಹೊಂದಿದ್ದರೆ, ನುಸ್ರಾ ಫ್ರಂಟ್ ಕೇವಲ 5ರಿಂದ 10 ಸಾವಿರ ಉಗ್ರರನ್ನು ಒಳಗೊಂಡಿದೆ. ಹೀಗಾಗಿ ಈ ಎರಡೂ ಉಗ್ರ ಸಂಘಟನೆಯ ನಂತರದ ಸ್ಥಾನದಲ್ಲಿ ಅಲ್ ಖೈದಾ ಇದೆ.

ಬಿಲ್ ಗೇಟ್ಸ್ ಹತ್ಯೆಗೆ ಅಲ್ ಖೈದಾ ಸಂಚು
ಮತ್ತೊಂದು ಮೂಲಗಳ ಪ್ರಕಾರ ಅಲ್ ಖೈದಾ ಅಸ್ತಿತ್ವಕ್ಕೆ ಭಾರಿ ಪೆಟ್ಟು ನೀಡಿದ ಅಮೆರಿಕಕ್ಕೆ ಪಾಠಕಲಿಸುವ ಮುಂದಾಗಿರುವ ಅಲ್ ಖೈದಾ, ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥ ಬಿಲ್  ಗೇಟ್ಸ್ ರಂತಹ ಖ್ಯಾತ ಉದ್ಯಮಿಗಳನ್ನು ಕೊಲ್ಲುವ ಯೋಜನೆ ರೂಪಿಸಿದೆ. ಆ ಮೂಲಕ ಅಮೆರಿದಕ ಬಲಿಷ್ಠ ಆರ್ಥಿಕತೆ ಮೇಲೆ ಹೊಡೆತ ನೀಡಲು ಅಲ್ ಖೈದಾ ತಯಾರಿ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com