ಪಠಾಣ್ ಕೋಟ್ ದಾಳಿಯಲ್ಲಿ ಆಂತರಿಕ ಪಾತ್ರ ಎಂದ ಪಾಕ್: ಆರೋಪವನ್ನು ತಳ್ಳಿ ಹಾಕಿದ ಸೇನೆ

ಪಠಾಣ್ ಕೋಟ್ ದಾಳಿಯಲ್ಲಿ ಆಂತರಿಕ ಪಾತ್ರವಿದೆ ಎಂದು ಪಾಕಿಸ್ತಾನ ಮಾಡಿರುವ ಆರೋಪವನ್ನು ಭಾರತೀಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಜಮ್ಮು: ಪಠಾಣ್ ಕೋಟ್ ದಾಳಿಯಲ್ಲಿ ಆಂತರಿಕ ಪಾತ್ರವಿದೆ ಎಂದು ಪಾಕಿಸ್ತಾನ ಮಾಡಿರುವ ಆರೋಪವನ್ನು ಭಾರತೀಯ ಸೇನೆ ತಿರಸ್ಕರಿಸಿದೆ.
ಪಠಾಣ್ ಕೋಟ್ ನಲ್ಲಿ ಭಯೋತ್ಪಾದಕರೂ ನಡೆಸಿದ ದಾಳಿಯಲ್ಲಿ ಆಂತರಿಕ ಪಾತ್ರವಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು. ಪಠಾಣ್ ಕೋಟ್ ದಾಳಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡ(ಎನ್ ಐಎ) ಆಂತರಿಕದವರ ಪಾತ್ರವಿಲ್ಲ ಎಂದು ಹೇಳಿದೆ. 
ಪಾಕಿಸ್ತಾನದ ತನಿಖಾ ತಂಡ ಸುಳ್ಳು ಆರೋಪ ಮಾಡುತ್ತಿದೆ ಎಂದು ಪಶ್ಚಿಮ ವಲಯದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆ ಜೆ ಸಿಂಗ್ ಹೇಳಿದ್ದಾರೆ. ಪಠಾಣ್ ಕೋಟ್ ಏರ್ ಬೇಸ್ ದಾಳಿಗೆ ಗಡಿ ಭಾಗದಿಂದ ಹಣದ ನೆರವು ಸಿಕ್ಕಿದ್ದು, ಯೋಜಿತ ದಾಳಿಯಾಗಿದೆ ಎಂದಿದ್ದಾರೆ.
ಗಡಿ ಭಾಗದಲ್ಲಿರುವ ಉಗ್ರಸಂಘಟನೆಗಳ ನೆರವು ನೀಡಿದೆ. ಮುಖ್ಯವಾಗಿ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಗೆ ಹಣದ ನೆರವು, ನಿಯಂತ್ರಣ ಮತ್ತು ದಾಳಿಗೆ ಯೋಜನೆ ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ. 
ಎನ್ ಐಎ ಸುಧೀರ್ಘ ತನಿಖೆ ನಡೆಸಿದ್ದು, ಇದರಲ್ಲಿ ಆಂತರಿಕದವರ ಪಾತ್ರವಿಲ್ಲ. ಪಾಕಿಸ್ತಾನದ ತನಿಖೆ ತಂಡ ಭಾರತದ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಹೇಳಿದ್ದಾರೆ. 
ಪಠಾಣ್ ಕೋಟ್ ವಾಯು ನೆಲದ ಮೇಲೆ ಉಗ್ರ ದಾಳಿ ಪ್ರಕರಣ ಸಂಬಂಧ ತನಿಖೆ ನಡೆಸಲು ಪಾಕಿಸ್ತಾನದ ತನಿಖಾ ತಂಡ ಭಾರತಕ್ಕೆ ಭೇಟಿ ನೀಡಿತ್ತು. ಪ್ರಕರಣ ಸಂಬಂಧ ಸಾಕಷ್ಟು ಮಾಹಿತಿ ಸಂಗ್ರಹಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com