ಪಾಕ್ ಮಿಲಿಟರಿಗೆ ನೀಡುತ್ತಿದ್ದ ಆರ್ಥಿಕ ನೆರವಿಗೆ ಕತ್ತರಿ ಹಾಕಿದ ಅಮೆರಿಕ!

ಹಕ್ಕಾನಿ ಉಗ್ರಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನದ ವಿರುದ್ಧ ಛಾಟಿ ಬೀಸಿರುವ ಅಮೆರಿಕ ಪಾಕ್ ಮಿಲಿಟರಿಗೆ ನೀಡುತ್ತಿದ್ದ ಆರ್ಥಿಕ ನೆರವಿನ ಪೈಕಿ ಬರೊಬ್ಬರಿ 300 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಅಮೆರಿಕ ಸೆನೆಟ್ ತಡೆ ಹಿಡಿದಿದೆ.
ಅಮೆರಿಕ ಸಂಸತ್ತು (ಸಂಗ್ರಹ ಚಿತ್ರ)
ಅಮೆರಿಕ ಸಂಸತ್ತು (ಸಂಗ್ರಹ ಚಿತ್ರ)

ವಾಷಿಂಗ್ಟನ್: ಹಕ್ಕಾನಿ ಉಗ್ರಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನದ ವಿರುದ್ಧ ಛಾಟಿ ಬೀಸಿರುವ ಅಮೆರಿಕ ಪಾಕ್ ಮಿಲಿಟರಿಗೆ ನೀಡುತ್ತಿದ್ದ ಆರ್ಥಿಕ ನೆರವಿನ  ಪೈಕಿ ಬರೊಬ್ಬರಿ 300 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಅಮೆರಿಕ ಸೆನೆಟ್ ತಡೆ ಹಿಡಿದಿದೆ.

ಪಾಕಿಸ್ತಾನ ಮಿಲಿಟರಿಗೆ ನೀಡುತ್ತಿರುವ ಆರ್ಥಿಕ ನೆರವನ್ನು ಸ್ಥಗಿತಗೊಳಿಸಲು ಅಮೆರಿಕ ಸೆನೆಟ್ ಕಳೆದವಾರವೇ ಒಪ್ಪಿದೆ ನೀಡಿತ್ತಾದರೂ, ಎಷ್ಟು ಪ್ರಮಾಣದಲ್ಲಿ ಕಡಿತಗೊಳಿಸಬೇಕು ಎಂಬುದನ್ನು  ನಿರ್ಧರಿಸಿರಲಿಲ್ಲ. ಹೀಗಾಗಿ ಇಂದು ಮತ್ತೆ ಸಭೆ ಸೇರಿದ್ದ ಸೆನೆಟ್ ಸದಸ್ಯರು 300 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ. ಈ ಹಿಂದೆ  ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಒಟ್ಟು 900 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುತ್ತಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಉಗ್ರ ಜಾಲಗಳ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮಿಲಿಟರಿ ಪಡೆ ತೆಗೆದುಕೊಳ್ಳುತ್ತಿರುವ ಕ್ರಮಗಳು ಸಮಾಧಾನಕರವಾಗಿಲ್ಲದ ಕಾರಣ ಅಮೆರಿಕ ಸಂಸತ್ತು  ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಈ ನಿಟ್ಟಿನಲ್ಲಿ ಇಂದು ಆರ್ಥಿಕ ನೆರವನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಅಮೆರಿಕ ಕಾಂಗ್ರೆಸ್ ಅಧಿಕೃತ ಮುದ್ರೆ ಒತ್ತಿದೆ. ಕೇವಲ ಇಷ್ಟು  ಮಾತ್ರವಲ್ಲದೇ ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿರುವ ಒಟ್ಟಾರೆ ಆರ್ಥಿಕ ನೆರವನ್ನು ಕೂಡ ನಿರ್ಧರಿಸಲಾಗಿದ್ದು, 900 ಮಿಲಿಯನ್ ಡಾಲರ್ ನಷ್ಟಿದ್ದ ಒಟ್ಟಾರೆ ಮಿಲಿಟರಿ ಆರ್ಥಿಕ ನೆರವಿನ  ಪ್ರಮಾಣವನ್ನು 800 ಮಿಲಿಯನ್ ಡಾಲರ್ ಇಳಿಸಲು ನಿರ್ಧರಿಸಲಾಗಿದೆ.

ಈ ಹಿಂದೆ ಅಮೆರಿಕ ಸರ್ಕಾರ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ (NDAA-2017)ಯಡಿಯಲ್ಲಿ ಪಾಕಿಸ್ತಾನಕ್ಕೆ ಸುಮಾರು 900 ಮಿಲಿಯನ್ ಡಾಲರ್ ನೆರವು ನೀಡುತ್ತಿತ್ತು. ಈ ಕಾಯ್ದೆಯನ್ವಯ  ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವಿನ ಅವಧಿ 2016ರ ಸೆಪ್ಟೆಂಬರ್ 30ರಂದು ಮುಕ್ತಾಯವಾಗಲಿದ್ದು, ಅದಕ್ಕೂ ಮುಂಚಿತವಾಗಿಯೇ ನೂತನ ಕಾಯ್ದೆ ತಿದ್ದುಪಡಿ ತರುವ ಮೂಲಕ ಅಮೆರಿಕ  ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವಿಗೆ ಕತ್ತರಿ ಹಾಕಿದೆ. ಅಮೆರಿಕ ಸರ್ಕಾರದ ತೀರ್ಮಾನದಿಂದ ಪಾಕಿಸ್ತಾನ ತೀವ್ರ ಮುಜುಗರಕ್ಕೀಡಾಗಿದೆ.

ಅಫ್ಘನ್ ಗಡಿ ಹತ್ತಿರದ ಉತ್ತರ ವಝೀರಿಸ್ತಾನ್ ಪ್ರದೇಶವನ್ನು ಪಾಕಿಸ್ತಾನ ಹಕ್ಕಾನಿ ಉಗ್ರರಿಗೆ  ಸುರಕ್ಷಿತ ಪ್ರದೇಶವನ್ನಾಗಿಸಿದೆ ಎಂಬ ಅರೋಪವಿದ್ದು, ಪಾಕಿಸ್ತಾನ ಸರ್ಕಾರ ಹಕ್ಕಾನಿ ಉಗ್ರರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದ್ಧತೆ ಪ್ರದರ್ಶಿಸಿಲ್ಲ ಎಂಬ ಆರೋಗಳು ಕೇಳಿಬಂದಿದ್ದವು. ಹೀಗಾಗಿ ಪಾಕ್ ಸರ್ಕಾರ ಹಕ್ಕಾನಿ ಉಗ್ರ ಸಂಘಟನೆ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಅಮೆರಿಕ  ರಕ್ಷಣಾ ಕಾರ್ಯದರ್ಶಿ ದೃಢೀಕರಿಸಿದ ನಂತರವಷ್ಟೇ ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವನ್ನು ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com