
ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್ 2017 ರ ಡಿಸೆಂಬರ್ ನಿಂದ ಮಾಲಿನ್ಯ ತಪಾಸಣೆಗೆ ಹೊಸ ಮಾನದಂಡವನ್ನು ಜಾರಿಗೆ ತರಲಿದ್ದು, ಇದು ವಿಶ್ವದಲ್ಲೇ ಅತ್ಯಂತ ಕಟ್ಟುನಿಟ್ಟಿನ ಮಾನದಂಡವಾಗಿರಲಿದೆ.
ಬೀಜಿಂಗ್ ನ ಪರಿಸರ ರಕ್ಷಣಾ ಸಂಸ್ಥೆಯ ಪ್ರಕಾರ ಚೀನಾ ಅಳವಡಿಸಿಕೊಳ್ಳಲು ಮುಂದಾಗಿರುವ ಮಾನದಂಡವನ್ನು ವಿಶ್ವದ ಬೇರೆ ಯಾವ ದೇಶಗಳಲ್ಲಿಯೂ ಈ ವರೆಗೂ ಅಳವಡಿಸಿಕೊಳ್ಳಲಾಗಿಲ್ಲವಂತೆ. ಪರಿಸರ ಮಾಲಿನ್ಯವನ್ನು ತಡೆಗಟ್ಟಲು 2004 ರಿಂದಲೂ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಚೀನಾ, ಅದೇ ವರ್ಷದಲ್ಲಿ ಬೀಜಿಂಗ್ II ಗ್ಯಾಸೋಲಿನ್ ಮಾನದಂಡವನ್ನು ಜಾರಿಗೆ ತಂದು 2007 ರಲ್ಲಿ ಸೀಸ ರಹಿತವಾದ ಗ್ಯಾಸೋಲಿನ್ ನನ್ನು ಬಳಕೆ ಮಾಡಲು ಮುಂದಾಗಿತ್ತು,
ನಂತರ 2005 , 2008, 2012 ರಲ್ಲಿ ಬೀಜಿಂಗ್ ಅನುಕ್ರಮವಾಗಿ ಬೀಜಿಂಗ್ III, IV , V ಗ್ಯಾಸೋಲಿನ್ ಸ್ಟ್ಯಾಂಡರ್ಡ್ ನ್ನು ಜಾರಿಗೊಳಿಸಿತ್ತು. ಈಗ ಜಾರಿಗೊಳಿಸಲಾಗುತ್ತಿರುವ ಬೀಜಿಂಗ್ VI ಸ್ಟ್ಯಾಂಡರ್ಡ್, ವಾಹನಗಳ ಹೈಡ್ರೋ ಕಾರ್ಬನ್ ನ್ನು ಶೇ.5 ಕ್ಕೆ ಇಳಿಸಲಿದ್ದು ಈ ಮಾನದಂಡ ಡಿಸೆಂಬರ್ 2017 ರಿಂದ ಜಾರಿಗೆ ಬರಲಿದೆ.
2022 ರ ವೇಳೆಗೆ ಬೀಜಿಂಗ್ ನ ಎಮಿಷನ್ ಮಾಲಿನ್ಯ ಶೇ.20 ರಿಂದ 30 ರಷ್ಟು ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
Advertisement