ಭಾರತ-ಇರಾನ್ ನಡುವಿನ ಚಾಬಹಾರ್ ಬಂದರು ಒಪ್ಪಂದ ಪ್ರಶ್ನಿಸಿದ ಅಮೆರಿಕ

ಭಾರತ- ಇರಾನ್ ನಡುವೆ ಏರ್ಪಟ್ಟಿರುವ ಚಾಬಹಾರ್ ಬಂದರು ನಿರ್ಮಾಣ ಒಪ್ಪಂದದ ಬಗ್ಗೆ ಅಮೆರಿಕ ಪ್ರಶ್ನಿಸಿದೆ.
ಅಮೆರಿಕ
ಅಮೆರಿಕ

ವಾಷಿಂಟ್ ಟನ್: ಭಾರತ- ಇರಾನ್ ನಡುವೆ ಏರ್ಪಟ್ಟಿರುವ ಚಾಬಹಾರ್ ಬಂದರು ನಿರ್ಮಾಣ ಒಪ್ಪಂದದ ಬಗ್ಗೆ ಅಮೆರಿಕ ಪ್ರಶ್ನಿಸಿದ್ದು, ಈ ಒಪ್ಪಂದದ ಯೋಜನೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.
ಮೋದಿ ಭೆಟಿಯ ವೇಳೆ ಏರ್ಪಟ್ಟ ಒಪ್ಪಂದದ ಬಗ್ಗೆ ಮಾತನಾಡಿರುವ ಅಮೆರಿಕದ ದಕ್ಷಿಣ ಹಾಗೂ ಮಧ್ಯ ಪ್ರಾಚ್ಯ ವ್ಯವಹಾರಗಳ ಇಲಾಖೆಯ ಅಧಿಕಾರಿ ನಿಶಾ ದೇಶಾಯಿ ಬಿಸ್ವಾಲ್, ಚಾಬಹಾರ್ ಬಂದರು ನಿರ್ಮಾಣದ ಒಪ್ಪಂದವನ್ನು ಅಮೆರಿಕ ಕೂಲಂಕುಷವಾಗಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಹಾಗೂ ಯುರೋಪ್ ಇತ್ತೀಚೆಗಷ್ಟೇ ಇರಾನ್ ಮೇಲೆ ವಿಧಿಸಿದ್ದ ನಿರ್ಭಂಧಗಳನ್ನು ತೆರವುಗೊಳಿಸಿತ್ತು  ಆದರೆ ವ್ಯಾಪಾರ ವಹಿವಾಟು ಸೇರಿದಂತೆ ಕೆಲವೊಂದು ಕ್ಷೇತ್ರಗಳಿಗೆ ನಿರ್ಬಂಧ ಈಗಲೂ ಅನ್ವಯವಾಗಲಿದ್ದು, ಇರಾನ್ ನೊಂದಿಗಿನ ಚಟುವಟಿಕೆಗಳ ಬಗ್ಗೆ ಭಾರತಕ್ಕೆ ಅಮೆರಿಕ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಎಂದು ನಿಶಾ ದೇಶಾಯಿ ಬಿಸ್ವಾಲ್ ತಿಳಿಸಿದ್ದಾರೆ.  ಇರಾನ್ ನೊಂದಿಗಿನ ಭಾರತದ ಸಂಬಂಧ ಆರ್ಥಿಕ ಹಾಗೂ ವಿದ್ಯುತ್ ಕ್ಷೇತ್ರಗಳನ್ನು ಉದ್ದೇಶಿಸಿದೆ.ಆದರೆ ಭಾರತ ಇರಾನ್ ನೊಂದಿಗೆ ಸೇನೆ ಸಹಕಾರಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದ ನಡೆದರೂ ಅದು ಅಮೆರಿಕಗೆ ಆತಂಕಕಾರಿ ಬೆಳವಣಿಗೆಯಾಗಿರಲಿದೆ ಎಂದು ಅಮೆರಿಕದ ಅಧಿಕಾರಿ ಸೂಕ್ಷ್ಮವಾಗಿ ಭಾರತ- ಇರಾನ್ ನಡುವೆ ನಡೆದಿರುವ ಚಾಬಹಾರ್ ಬಂದರು ಒಪ್ಪಂದವನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com