ಚೆನ್ನೈ: ಶ್ರೀಲಂಕಾ ನೌಕಾ ಪಡೆ ತಮಿಳುನಾಡಿನ ಏಳು ಮೀನುಗಾರರನ್ನು ಕಳೆದ ರಾತ್ರಿ ಬಂಧಿಸಿದೆ.
ಅಂತರಾಷ್ಟ್ರಿಯ ಜಲ ಗಡಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 7 ಮೀನುಗಾರರನ್ನು ಬಂಧಿಸಿದ್ದು, ಒಂದು ಬೋಟನ್ನು ವಶಕ್ಕೆ ಪಡೆದಿದ್ದಾರೆ.
45 ದಿನಗಳ ಕಾಲ ಮೀನು ಹಿಡಿಯಲು ನಿಷೇಧವೇರಿದ್ದರೂ ರಾಮೇಶ್ವರದ ಮೀನುಗಾರರು ಅಂತರಾಷ್ಟ್ರೀಯ ಜಲದಲ್ಲಿ ಮೀನು ಹಿಡಿಯಲು ತೆರಳಿದ್ದರು. ಬಂಧನಕ್ಕೊಳಗಾಗಿರುವ ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ತಲೈ ಮನ್ನಾರ್ ಗೆ ಕರೆದೊಯ್ದಿದೆ ಎಂದು ಮೂಲಗಳು ತಿಳಿಸಿವೆ.