ಕರಾಚಿಯಲ್ಲಿ ರೈಲು ಅಪಘಾತ: ಕನಿಷ್ಟ 16 ಮಂದಿ ಸಾವು, 40 ಜನರಿಗೆ ಗಾಯ

ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ಇಂದು ಎರಡು ರೈಲುಗಳು ಪರಸ್ಪರ ಢಿಕ್ಕಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಇಸ್ಲಾಮಾಬಾದ್: ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ಇಂದು ಎರಡು ರೈಲುಗಳು ಪರಸ್ಪರ ಢಿಕ್ಕಿ ಹೊಡೆದು 16 ಮಂದಿ ಪ್ರಯಾಣಿಕರು ಮೃತಪಟ್ಟು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಎರಡನೇ ಅತಿದೊಡ್ಡ ರೈಲು ಅಪಘಾತ ಇದಾಗಿದೆ.
ಕರಾಚಿಯ ಲ್ಯಾಂಡಿ ರೈಲ್ವೆ ಸ್ಟೇಷನ್ ಹತ್ತಿರ ಝಕಾರಿಯಾ ಎಕ್ಸ್ ಪ್ರೆಸ್ ಮತ್ತು ಫರೀದ್ ಎಕ್ಸ್ ಪ್ರೆಸ್ ರೈಲುಗಳ ಮಧ್ಯೆ ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದ್ದು ಕರಾಚಿ ಮತ್ತು ದೇಶದ ಇತರೆಡೆಗೆ ಅಲ್ಲಿಂದ ಹೋಗುವ ರೈಲು ಮಾರ್ಗದಲ್ಲಿ ಸದ್ಯ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡುತ್ತಿವೆ. 
ಗಾಯಗೊಂಡವರನ್ನು ಕರಾಚಿಯ ಜಿನ್ಹಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ತುರ್ತು ವಿಭಾಗದ ಮುಖ್ಯಸ್ಥ ಡಾ.ಸೀಮಿನ್ ಜಮಲಿ ತಿಳಿಸಿದ್ದಾರೆ.
''ಅಪಘಾತದಲ್ಲಿ ಇಲ್ಲಿಯವರೆಗೆ 16 ಮಂದಿ ಮೃತಪಟ್ಟಿದ್ದಾರೆ'' ಎಂದು ಕರಾಚಿಯ ಹಿರಿಯ ಪೊಲೀಸ್ ಅಧಿಕಾರಿ ಜವೆನ್ ಅಕ್ಬರ್ ರಿಯಾಜ್ ರಾಯ್ ಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ಎಕ್ಸ್ ಪ್ರೆಸ್ ರೈಲು ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದ ಬಳಿ ಸರಕು ರೈಲಿಗೆ ಢಿಕ್ಕಿ ಹೊಡೆದು ಕನಿಷ್ಟ ನಾಲ್ಕು ಮಂದಿ ಮೃತಪಟ್ಟು 93 ಜನ ಗಾಯಗೊಂಡಿದ್ದಾರೆ. 
ರೈಲಿನ ಯಂತ್ರದ ಕಳಪೆ ನಿರ್ವಹಣೆ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com