ಅಮೆರಿಕಾದ ಪ್ರಥಮ ಮಹಿಳೆಯಾದರೆ ಸೈಬರ್ ಅಪರಾಧ ತಡೆಯುವುದು ನನ್ನ ಆದ್ಯತೆ: ಮೆಲಾನಿಯಾ ಟ್ರಂಪ್

ತಮ್ಮ ಪತಿ ಅಧ್ಯಕ್ಷರಾದರೆ ಮಕ್ಕಳು ಮತ್ತು ಹದಿಹರೆಯದವರಿಗೆ ಬಹಳ ಪ್ರಿಯವಾಗಿರುವ...
ಮೆಲಾನಿಯಾ ಟ್ರಂಪ್
ಮೆಲಾನಿಯಾ ಟ್ರಂಪ್
ಫಿಲಡೆಲ್ಫಿಯಾ: ತಮ್ಮ ಪತಿ ಅಧ್ಯಕ್ಷರಾದರೆ ಮಕ್ಕಳು ಮತ್ತು ಹದಿಹರೆಯದವರಿಗೆ ಬಹಳ ಪ್ರಿಯವಾಗಿರುವ ಸಾಮಾಜಿಕ ಮಾಧ್ಯಮ ಸಂಸ್ಕೃತಿಯನ್ನು ಸುಧಾರಿಸಲು ಶ್ರಮಿಸುವುದಾಗಿ ಅಮೆರಿಕಾದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಮೆಲಾನಿಯಾ ಟ್ರಂಪ್ ಹೇಳಿದರು.
ಸ್ನೊವೇನಿಯಾದಲ್ಲಿ ಹುಟ್ಟಿ 2006ರಲ್ಲಿ ಅಮೆರಿಕಾದ ಪ್ರಜೆಯಾಗಿರುವ ಮನೇನಿಯಾ ಟ್ರಂಪ್, ಅಮೆರಿಕಾದ ಪ್ರಜೆಯಾಗುವುದು ಅತಿ ದೊಡ್ಡ ಸೌಭಾಗ್ಯ ಎಂದು ನುಡಿದರು.
ನಾನು ವಲಸಿಗಳು. ಅಮೆರಿಕಾದ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ನಾನು ಬಹಳವಾಗಿ ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ಪತಿ ಅಧ್ಯಕ್ಷರಾಗಿ ಆಯ್ಕೆಯಾದರೆ ಅಮೆರಿಕಾದ ಮೊದಲ ಮಹಿಳೆಯಾಗಿ ತಮ್ಮ ಕರ್ತವ್ಯಗಳ ಬಗ್ಗೆ ಹೇಳಿದರು.
12 ವರ್ಷದ ಬಾಲಕ ಮತ್ತು ಬಾಲಕಿ ಅಪಹಾಸ್ಯ, ಹಿಂಸೆ, ದಾಳಿ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಮಕ್ಕಳು ಆಟವಾಡುವ ಮೈದಾನದಲ್ಲಿ ಹಾಗಾದರೆ ಆ ಮನೋಭಾವವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅಂತರ್ಜಾಲವನ್ನು ಕೂಡ ಮಕ್ಕಳು ದುರ್ಬಳಕೆ ಮಾಡುವುದು ತಪ್ಪು. ನಮ್ಮ ಮಕ್ಕಳಲ್ಲಿ ಮೂಲವಾಗಿ ಉತ್ತಮ ಗುಣ, ನಡತೆಗಳನ್ನು ಬೆಳೆಸಬೇಕು. ಮುಖ್ಯವಾಗಿ ಸಾಮಾಜಿಕ ತಾಣದಲ್ಲಿ ಎಂದು ಹೇಳಿದರು.
ತಮ್ಮ ಪತಿ ಅಮೆರಿಕಾದ ಕಾರ್ಮಿಕ ವರ್ಗದ ಪರ ಎಂದು ಮೆಲಾನಿಯಾ ಹೇಳಿದರು.
ಇದು ಫಿಲಡೆಲ್ಫಿಯಾದಲ್ಲಿ ಮೆಲಾನಿಯಾ ಟ್ರಂಪ್ ಮಾಡಿದ ಮೊದಲ ಬಹುದೊಡ್ಡ ಭಾಷಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com