

ಕಾಬುಲ್: ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ರಾಷ್ಟ್ರ ಅತ್ಯಂತ ದೊಡ್ಡ ಸೇನಾ ನೆಲೆಯ ಮೇಲೆ ಆತ್ಮಾಹುತಿ ದಾಳಿಯನ್ನು ನಡೆಸಲಾಗಿದ್ದು, ದಾಳಿಯಲ್ಲಿ ನಾಲ್ವರು ಮೃತಪಟ್ಟು ಹಲವರಿಗೆ ಗಾಯವಾಗಿರುವ ಘಟನೆ ನಡೆದಿದೆ.
ಕಾರ್ಮಿಕನ ವೇಷ ಧರಿಸಿ ಬಂದಿರುವ ಅತ್ಮಾಹುತಿ ದಾಳಿಕೋರ ದಾಳಿ ನಡೆಸಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತ್ಮಾಹುತಿ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ ಎಂದುಪ ತಿಳಿದುಬಂದಿದೆ. ಘಟನೆಯಲ್ಲಿ ಅಮೆರಿಕ ರಾಷ್ಟ್ರದ ಇಬ್ಬರು ಯೋಧರು, ಇಬ್ಬರು ಗುತ್ತಿಗೆದಾರರು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಅಫ್ಘಾನಿದಲ್ಲಿರುವ ಅಮೆರಿಕ ಕೇಂದ್ರಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿರುತ್ತದೆ. ಭದ್ರತೆಯ ನಡುವೆಯೂ ದಾಳಿಯನ್ನು ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಭದ್ರತೆ ಕುರಿತಂತೆ ಮತ್ತಷ್ಟು ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಪಾಗುತ್ತದೆ ಎಂದು ರಕ್ಷಣಾ ಕಾರ್ಯದರ್ಶಿ ಕಾರ್ಟರ್ ಅವರು ಹೇಳಿದ್ದಾರೆ.
Advertisement