ಸಾರ್ವಜನಿಕ ಕಟ್ಟಡದಲ್ಲಿ ನಿಕಾಬ್ ತೆಗೆಯಲು ನಿರಾಕರಿಸಿದ ಮಹಿಳೆಗೆ ದಂಡ!

ಸಾರ್ವಜನಿಕ ಕಟ್ಟಡದಲ್ಲಿ ಹಿಜಾಬ್ (ನಿಕಾಬ್ ಅಥವಾ ಅಲ್‌ಅಮೀರ) ನ್ನು ತೆಗೆಯಲು ನಿರಾಕರಿಸಿದ ಅಲ್ಬೇನಿಯನ್ ಮುಸ್ಲಿಂ ಮಹಿಳೆಯೊಬ್ಬರಿಗೆ ರೋಮ್ ನಲ್ಲ್ 30,000 ಯುರೋಗಳಷ್ಟು ದಂಡ ವಿಧಿಸಲಾಗಿದೆ.
ನಿಕಾಬ್ (ಸಂಗ್ರಹ ಚಿತ್ರ)
ನಿಕಾಬ್ (ಸಂಗ್ರಹ ಚಿತ್ರ)
ರೋಮ್: ಸಾರ್ವಜನಿಕ ಕಟ್ಟಡದಲ್ಲಿ ಹಿಜಾಬ್ (ನಿಕಾಬ್ ಅಥವಾ ಅಲ್‌ಅಮೀರ) ನ್ನು ತೆಗೆಯಲು ನಿರಾಕರಿಸಿದ ಅಲ್ಬೇನಿಯನ್ ಮುಸ್ಲಿಂ ಮಹಿಳೆಯೊಬ್ಬರಿಗೆ ರೋಮ್ ನಲ್ಲ್ 30,000 ಯುರೋಗಳಷ್ಟು ದಂಡ ವಿಧಿಸಲಾಗಿದೆ. 
ಇಟಾಲಿಯ ಸ್ಯಾನ್ ವಿಟೋ ಅಲ್ ಟ್ಯಾಗ್ಲಿಯಾಮೆಂಟೋ ಕಟ್ಟಡದಲ್ಲಿ ಹಿಜಾಬ್ ನ್ನು ತೆಗೆದು ಕಟ್ಟಡದೊಳಗೆ ಪ್ರವೇಶಿಸಬೇಕೆಂಬ ನಿಯಮವಿದೆ. ಆದರೆ ಕಟ್ಟಡದೊಳಗೆ ಪ್ರವೇಶಿಸುವ ಮುನ್ನ ಮುಸ್ಲಿಂ ಮಹಿಳೇ ಹಿಜಾಬ್ ನ್ನು ತೆಗೆಯಲು ನಿರಾಕರಿಸಿದ ಕಾರಣ ಆಕೆಗೆ ಅಲ್ಲಿನ ನ್ಯಾಯಾಧೀಶರು 30,000 ಯುರೋ ದಂಡ ಹಾಕಿದ್ದಾರೆ. 
ಕಳೆದ ತಿಂಗಳು ಸ್ಯಾನ್ ವಿಟೋ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮಹಿಳೆ ಅಲ್ಲಿನ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿದ್ದರು. ನಂತರ ಪೊಲೀಸರನ್ನು ಕರೆಸಿ ಆಕೆಯನ್ನು ಕೌನ್ಸಿಲ್ ಸಭೆಯಿಂದ ಹೊರಕಳಿಸಲಾಗಿತ್ತು. ಸ್ಯಾನ್ ವಿಟೋ ಕಟ್ಟದಲ್ಲಿ 2000 ರಿಂದ ಇದ್ದ ಮುಸ್ಲಿಂ ಮಹಿಳೆ ಇತ್ತೀಚೆಗಷ್ಟೇ ಇಟಾಲಿ ಪೌರತ್ವ ಪಡೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com