ಯುದ್ಧ ಈಗ ಶುರುವಾಗಿದೆ...ಟ್ರಂಪ್‌ಗೆ ಬೋಕೋ ಹರಾಮ್ ಮುಖ್ಯಸ್ಥನ ಎಚ್ಚರಿಕೆ!

ಅಮೆರಿಕ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಗೆ ಬೋಕೋ ಹರಾಮ್ ಉಗ್ರ ಸಂಘಟನೆಯ ಮುಖ್ಯಸ್ಥ ಎಚ್ಚರಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ...
ಬೋಕೋ ಹರಾಮ್
ಬೋಕೋ ಹರಾಮ್
ಕನೋ: ಅಮೆರಿಕ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಗೆ ಬೋಕೋ ಹರಾಮ್ ಉಗ್ರ ಸಂಘಟನೆಯ ಮುಖ್ಯಸ್ಥ ಎಚ್ಚರಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಬಿಡುಗಡೆ ಮಾಡಿದೆ. 
ಇರಾಕ್, ಸಿರಿಯಾ ಮತ್ತು ಆಫ್ಗಾನಿಸ್ತಾನದಲ್ಲಿ ನಮ್ಮ ಸಹೋದರರ ಮೇಲೆ ಡೊನಾಲ್ಡ್ ಟ್ರಂಪ್ ಸೇರಿದಂತೆ ಇನ್ನಿತರ ರಾಷ್ಟ್ರಗಳ ನಾಯಕರು ದಾಳಿ ನಡೆಸುತ್ತಿದ್ದು ಅದನ್ನು ನಾವು ನೋಡಿಕೊಂಡು ಸುಮ್ಮನಿರುವುದಿಲ್ಲ ಎಂದು ಬೋಕೋ ಹರಾಮ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕ್ಕರ್ ಶೇಖಾವ್ ಎಚ್ಚರಿಕೆ ನೀಡಿರುವ ಧ್ವನಿ ಮುದ್ರಿತ ಸಂದೇಶವನ್ನು ಬಿಡುಗಡೆ ಮಾಡಲಾಗಿದೆ. 
ನಮ್ಮ ನಂಬಿಕೆ ಅಚಲವಾಗಿದ್ದು ಅದನ್ನು ನಾವು ನಿಲ್ಲಿಸುವುದಿಲ್ಲ. ನಮಗೆ ಯುದ್ಧ ಈಗಸ್ಟೆ ಶುರುವಾಗಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಬೋಕೋ ಹರಾಮ್ ಉಗ್ರ ಸಂಘಟನೆ ಏಳು ವರ್ಷಗಳಿಂದ ನೈಜಿರಿಯಾದಲ್ಲಿ ತನ್ನ ಕರಾಳ ಮುಖವನ್ನು ತೋರಿಸುತ್ತಿದೆ. ಇಲ್ಲಿಯವರೆಗೂ ಸುಮಾರು 20 ಸಾವಿರ ಜೀವನಗಳನ್ನು ತೆಗೆದಿದ್ದಾರೆ. 
ಬೋಕೋ ಹರಾಮ್ ಉಗ್ರ ಸಂಘಟನೆ ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ಕೈ ಜೋಡಿಸಿತ್ತು. ಅಲ್ಲಿಂದ ಪಶ್ಚಿಮ ಆಫ್ರಿಕಾದಲ್ಲಿ ತನ್ನ ರೌದ್ರನರ್ತನವನ್ನು ತೋರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com