
ವಾಷಿಂಗ್ಟನ್: ಅಮೆರಿಕಾ ರಾಷ್ಟ್ರದ ಅಧ್ಯಕ್ಷ ಚುನಾವಣೆ ವೇಳೆ ವಲಸಿಗರನ್ನು ಅಮೆರಿಕಾದಿಂದ ಹೊರ ಹಾಕುವುದಾಗಿ ಭರವಸೆ ನೀಡಿದ್ದ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರು ಇದೀಗ ತಮ್ಮ ಮಾತನ್ನು ಉಳಿಸಿಕೊಳ್ಳಲು ಮುಂದಾಗಿದ್ದು, 30 ಲಕ್ಷ ವಲಸಿಗರನ್ನು ಹೊರಹಾಕುವುದಾಗಿ ಭಾನುವಾರ ಹೇಳಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಮರ್ಪಕ ದಾಖಲೆಗಳನ್ನು ಹೊಂದಿರದ 30 ಲಕ್ಷ ವಲಸೆಗಾರರನ್ನು ಅಮೆರಿಕ ರಾಷ್ಟ್ರದಿಂದ ಹೊರಹಾಕುವುದಾಗಿ ಹೇಳಿಕೊಂಡಿದ್ದಾರೆ.
ದೇಶದಲ್ಲಿ 2 ಮಿಲಿಯನ್ ರಷ್ಟು ಅಪರಾಧ ಮತ್ತು ಅಪರಾಧ ಹಿನ್ನೆಲೆ ಇರುವವರು, ಗ್ಯಾಂಗ್ ಸದಸ್ಯರು, ಡ್ರಗ್ ಜಾಲದಲ್ಲಿರುವವರಿದ್ದು, ಅವರ ವಿರುದ್ಧ ಅಮೆರಿಕ ಶೀಘ್ರದಲ್ಲಿಯೇ ಕ್ರಮಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
Advertisement