ಕಾನ್ಪುರ ರೈಲು ದುರಂತ: ಸಂತಾಪ ಸೂಚಿಸಿದ ಬಾಂಗ್ಲಾ ಪ್ರಧಾನಿ

ಉತ್ತರ ಪ್ರದೇಶದ ಕಾನ್ಪುರ ಪುಖರಾಯ ರೈಲ್ವೇ ನಿಲ್ದಾಣ ಸಮೀಪ ನಡೆದ ಇಂದೋರ್-ಪಾಟ್ನಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ...
ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ
ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ

ಢಾಕಾ: ಉತ್ತರ ಪ್ರದೇಶದ ಕಾನ್ಪುರ ಪುಖರಾಯ ರೈಲ್ವೇ ನಿಲ್ದಾಣ ಸಮೀಪ ನಡೆದ ಇಂದೋರ್-ಪಾಟ್ನಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಸೋಮವಾರ ಸಂತಾಪ ಸೂಚಿಸಿದ್ದಾರೆ.

ರೈಲು ದುರಂತ ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಂದೇಶ ರವಾನಿಸಿರುವ ಅವರು, ರೈಲು ದುರಂತ ಪ್ರಕರಣದ ಸುದ್ದಿ ಕೇಳಿ ಸಾಕಷ್ಟು ಆಘಾತವಾಯಿತು. ಅಪಘಾತದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ, ನೂರಾರು ಸಂಖ್ಯೆಯ ಜನರು ಗಾಯಗೊಂಡಿದ್ದಾರೆ. ಘಟನೆಯಿಂದ ನಿಜಕ್ಕೂ ಮನಸ್ಸಿಗೆ ಆಘಾತವಾಗಿದೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

ಉತ್ತರಪ್ರದೇಶದ ಪುಖರಾಯಾ ಬಳಿ ಝಾನ್ಸಿ-ಕಾನ್ಪುರ ರೈಲ್ವೆ ಮಾರ್ಗದಲ್ಲಿ ಭಾನುವಾರ ಬೆಳಿಗ್ಗೆ 14 ಬೋಗಿಗಳಿದ್ದ ಇಂದೋರ್ ಪಾಟ್ನಾ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿತ್ತು. ದುರ್ಘಟನೆಯಲ್ಲಿ ಈ ವರೆಗೂ 125ಕ್ಕೂ ಮಂದಿ ಸಾವನ್ನಪ್ಪಿದ್ದು, 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com