ಕೊಲಂಬಿಯಾ ವಿಮಾನ ಅಪಘಾತ; 25 ಶವ ಹೊರತೆಗೆದ ಸಿಬ್ಬಂದಿ, ಆರು ಮಂದಿ ರಕ್ಷಣೆ!

ಕೊಲಂಬಿಯಾದಲ್ಲಿ ಅಪಘಾತಕ್ಕೀಡಾದ ವಿಮಾನದಿಂದ ಸುಮಾರು 25 ಶವಗಳನ್ನು ಹೊರತೆಗೆಯಲಾಗಿದ್ದು, ಐದು ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತಕ್ಕೀಡಾದ ವಿಮಾನ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು (ಡೈಲಿಮೇಲ್ ಚಿತ್ರ)
ಅಪಘಾತಕ್ಕೀಡಾದ ವಿಮಾನ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು (ಡೈಲಿಮೇಲ್ ಚಿತ್ರ)

ಮಿಡೆಲ್ಲಿನ್: ಕೊಲಂಬಿಯಾದಲ್ಲಿ ಅಪಘಾತಕ್ಕೀಡಾದ ವಿಮಾನದಿಂದ ಸುಮಾರು 25 ಶವಗಳನ್ನು ಹೊರತೆಗೆಯಲಾಗಿದ್ದು, ಐದು ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಫುಟ್ ಬಾಲ್ ಆಟಗಾರನ್ನು ಒಳಗೊಂಡಂತೆ ಸುಮಾರು 81 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಚಾರ್ಟೆಡ್ ವಿಮಾನ ಕೊಲಂಬಿಯಾ ಪರ್ವತ ಶ್ರೇಣಿಯಲ್ಲಿ ಪತನವಾಗಿದ್ದು, ದುರಂತದಲ್ಲಿ ಈ ವರೆಗೂ ಸುಮಾರು 25  ಶವಗಳನ್ನು ಹೊರತೆಗೆಯಲಾಗಿದೆ. ಅಂತೆಯೇ 6 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಪ್ರಾಣಾಪಾಯದಿಂದ ಪಾರಾದವರ ಪೈಕಿ ಬ್ರೆಜಿಲ್ ಫುಟ್ ಬಾಲ್ ತಂಡದ ನಾಯಕ ಕೂಡ ಸೇರಿದ್ದಾರೆ ಎಂದು ಸ್ಥಳೀಯ ಮೆಡೆಲ್ಲಿನ್ ಪ್ರಾಂತ್ಯದ ಮೇಯರ್ ಫೆಡರಿಕೋ ಗಿಟೈರೆಜ್ ಅವರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ  ಭರದಿಂದ ಸಾಗಿದ್ದು, 10ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಹಾಗೂ 25ಕ್ಕೂ ಹೆಚ್ಚು ಸಿಬ್ಬಂದಿಗಳು ದುರಂತ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.


ಮೂಲಗಳ ಪ್ರಕಾರ ಬ್ರೆಜಿಲ್ ನ ಲಮಿಯಾ ಏರ್ ಲೈನ್ಸ್ ಗೆ ಸೇರಿದ ವಿಮಾನ ಬ್ರೆಜಿಲ್ ನಿಂದ ಕೊಲಂಬಿಯಾ ತೆರಳುತ್ತಿತ್ತು. ಈ ನಡುವೆ ವಿಮಾನ ಸ್ಯಾಂಟಾಕ್ರೂಜ್ ಹಾಗೂ ಬೊಲಿವಿಯಾದಲ್ಲಿ ಲ್ಯಾಂಡ್ ಆಗಿತ್ತು. ಬಳಿಕ  ಕೊಲಂಬಿಯಾದತ್ತ ಪ್ರಯಾಣ ಬೆಳೆಸಿತ್ತು. ಈ ನಡುವೆ ವಿಮಾನ ವಿದ್ಯುತ್ ಮತ್ತು ತಾಂತ್ರಿಕ ದೋಷದಿಂದಾಗಿ ಮೆಡೆಲ್ಲಿನ್ ಪರ್ವತ ಶ್ರೇಣಿ ಬಳಿ ದುರಂತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಸಮಸ್ಯೆಯಿಂದಾಗಿ ವಿಮಾನ ಅಪಘಾತ: ತಜ್ಞರು
ಇನ್ನು ವಿಮಾನ ಅಪಘಾತ ಸಂಬಂಧ ದುರಂತ ಸ್ಥಳದಲ್ಲಿ ಪರೀಕ್ಷೆ ನಡೆಸಿದ ತಜ್ಞರ ತಂಡ ವಿಮಾನ ಅಪಘಾತಕ್ಕೆ ವಿದ್ಯುತ್ ಸಮಸ್ಯೆಯೇ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಕಾಲಮಾನ ರಾತ್ರಿ 10 ಗಂಟೆ ಸುಮಾರಿನಲ್ಲಿ  ತುರ್ತು ಸಂದೇಶ ರವಾನಿಸಿದ ವಿಮಾನ ಬಳಿಕ ದುರಂತಕ್ಕೀಡಾಗಿದೆ.

ಫೈನಲ್ ಮ್ಯಾಚ್ ಆಡಲು ತೆರಳುತ್ತಿದ್ದ ಫುಟ್ ಬಾಲ್ ಆಟಗಾರರು


ಅಪಘಾತಕ್ಕೀಡಾದ ವಿಮಾನದಲ್ಲಿ ಫುಟ್ ಬಾಲ್ ಆಟಗಾರರು ಸ್ಥಳೀಯ ಕೋಪಾಸುಡಾಮೆರಿಕ ಪಂದ್ಯಾವಳಿಯ ಫೈನಲ್ ಪಂದ್ಯವನ್ನಾಡಲು ಕೊಲಂಬಿಯಾಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com