50 ವರ್ಷಗಳ ಬಳಿಕ ಕ್ಯೂಬಾಗೆ ನೇರ ವಿಮಾನಯಾನ ಸೇವೆ ಆರಂಭಿಸಿದ ಅಮೆರಿಕ

ಬರೊಬ್ಬರಿ 50 ವರ್ಷಗಳ ಬಳಿಕ ಅಮೆರಿಕದಿಂದ ಕ್ಯೂಬಾಕ್ಕೆ ನೇರ ವಿಮಾನಯಾನ ಸೇವೆ ಆರಂಭವಾಗಿದೆ.
ಮಿಯಾಮಿ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
ಮಿಯಾಮಿ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)

ಮಿಯಾಮಿ: ಬರೊಬ್ಬರಿ 50 ವರ್ಷಗಳ ಬಳಿಕ ಅಮೆರಿಕದಿಂದ ಕ್ಯೂಬಾಕ್ಕೆ ನೇರ ವಿಮಾನಯಾನ ಸೇವೆ ಆರಂಭವಾಗಿದೆ.

ಕ್ಯೂಬಾ ಮತ್ತು ಅಮೆರಿಕ ನಡುವಿನ ಐತಿಹಾಸಿಕ ಶೀತಲ ಸಮರಕ್ಕೆ ತೆರೆ ಎಳೆಯುವ ಉದ್ದೇಶದಿಂದ ಈ ಹಿಂದೆ ಅಧ್ಯಕ್ಷ ಬರಾಕ್ ಒಬಾಮ ಕ್ಯೂಬಾ ದೇಶಕ್ಕೆ ಪ್ರಯಾಣ ಬೆಳಿಸಿದ್ದರು. ಅದರ ಮುಂದುವರಿದ ಭಾಗವೆಂಬತೆ ಅಮೆರಿಕ  ಇದೀಗ ಕ್ಯೂಬಾ ದೇಶಕ್ಕೆ ನೇರ ವಿಮಾನಯಾನ ಸೇವೆ ಆರಂಭಿಸಿದೆ. ನಿನ್ನೆ ಅಮೆರಿಕದ ಮಿಯಾಮಿಯಿಂದ ಬೆಳಗ್ಗೆ 7.30ರವ ಹೊತ್ತಿಗೆ ಕ್ಯೂಬಾದತ್ತ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ವಿಮಾನ ಇಂದು ಕ್ಯೂಬಾದ ಹವಾನಾ ತಲುಪಿದ್ದು,  ಕ್ಯೂಬಾದಿಂದ ನೇರವಾಗಿ ಪ್ರಯಾಣಿಕರನ್ನು ಹೊತ್ತು ಅಮೆರಿಕಕ್ಕೆ ಬರಲಿದೆ.

ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ನಿಧನದ ಮರು ದಿನವೇ ಅಮೆರಿಕ ಕ್ಯೂಬಾ ದೇಶಕ್ಕೆ ನೇರ ವಿಮಾನಯಾನ ಸೇವೆ ಆರಂಭಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಮೆರಿಕ ಹಾಗೂ ಕ್ಯೂಬಾದ ನಡುವಿನ  ಬಿಕ್ಕಟ್ಟಿನಿಂದಾಗಿ 1979ರಿಂದ ಕಳೆದ ವರ್ಷಾಂತ್ಯದವರೆವಿಗೂ ಉಭಯ ದೇಶಗಳ ನಡುವೆ ವಿಮಾನಯಾನ ಸೇವೆ ರದ್ದಾಗಿತ್ತು. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಕ್ಯೂಬಾ ದೇಶಕ್ಕೆ ಪ್ರವಾಸ ತೆರಳುವ ಮೂಲಕ  ಉಭಯ ದೇಶಗಳ ನಡುವೆ ಮತ್ತೆ ಬಾಂಧವ್ಯ ಬೆಸೆಯುವ ಯತ್ನ ಮಾಡಿದ್ದರು. ಅದರ ಫಲಶೃತಿ ಎಂಬಂತೆ ಕಳೆದ ಆಗಸ್ಟ್ 31ರಿಂದಲೇ ವಾಣಿಜ್ಯ ಉದ್ದೇಶದ ವಿಮಾನಗಳು ಕ್ಯೂಬಾ ದೇಶಕ್ಕೆ ಹಾರಾಟ ನಡೆಸುತ್ತಿದ್ದವು. ಆದರೆ ಇದೀಗ  ಸಾಂಪ್ರದಾಯಿಕ ಎದುರಾಳಿ ದೇಶಗಳ ನಡುವೆ 50 ವರ್ಷಗಳ ಬಳಿಕ ನೇರ ಪ್ರಯಾಣಿಕ ವಿಮಾನಯಾನ ಸೇವೆ ಆರಂಭವಾಗಿದೆ.

ಪ್ರಸ್ತುತ ಆರಂಭವಾಗಿರುವ ವಿಮಾನ ಸೇವೆ ಕ್ಯೂಬಾದ ಪ್ರಮುಖ 9 ನಗರಗಳಿಗೆ ವಿಸ್ತಾರವಾಗಿದ್ದು, ಪ್ರತಿನಿತ್ಯ ಸುಮಾರು 110 ವಿಮಾನಗಳು ಕ್ಯೂಬಾಕ್ಕೆ ಹಾರುತ್ತಿವೆ. ಈ ಪೈಕಿ 20 ವಿಮಾನಗಳು ಕ್ಯೂಬಾ ರಾಜಧಾನಿ ಹವಾನಾ ಹಾಗೂ  ಅಮೆರಿಕದ ಮಿಯಾಮಿ ನಡುವೆ ಸಂಚಾರ ನಡೆಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com