ಭಾರತದಲ್ಲಿ ದಾಳಿ ನಡೆಸುವ ಸಂಚನ್ನು ಒಪ್ಪಿಕೊಂಡ ಖಾಲಿಸ್ತಾನ ಬೆಂಬಲಿಗ
ವಿದೇಶ
ಭಾರತದಲ್ಲಿ ದಾಳಿ ನಡೆಸುವ ಸಂಚನ್ನು ಒಪ್ಪಿಕೊಂಡ ಖಾಲಿಸ್ತಾನ ಬೆಂಬಲಿಗ
ಭಾರತದಲ್ಲಿ ದಾಳಿ ನಡೆಸಲು ಭಯೋತ್ಪಾದಕರೊಂದಿಗೆ ಸೇರಿ ಸಂಚು ರೂಪಿಸಿದ್ದನ್ನು ಖಾಲಿಸ್ತಾನದ ಬೆಂಬಲಿಗನೊಬ್ಬ ಫೆಡರಲ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ.
ನ್ಯೂಯಾರ್ಕ್: ಭಾರತದಲ್ಲಿ ದಾಳಿ ನಡೆಸಲು ಭಯೋತ್ಪಾದಕರೊಂದಿಗೆ ಸೇರಿ ಸಂಚು ರೂಪಿಸಿದ್ದನ್ನು ಖಾಲಿಸ್ತಾನದ ಬೆಂಬಲಿಗನೊಬ್ಬ ಫೆಡರಲ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ.
ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯ ಮೂಲದ ಬಲ್ವೀಂದರ್ ಸಿಂಗ್, ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರಾದ ಲ್ಯಾರಿ ಆರ್ ಹಿಕ್ಸ್ ಎದುರು ತಪ್ಪೊಪ್ಪಿಗೆ ನೀಡಿದ್ದು, ದಾಳಿ ನಡೆಸಲು ಸಂಚು ರೂಪಿಸಿದ್ದವರಿಗೆ ಸಹಕಾರಿಯಾಗುವಂತೆ ನೈಟ್ ವಿಷನ್ ಗಾಗಲ್ ಗಳನ್ನು ಒದಗಿಸಿದ್ದಾಗಿ ಬಲ್ವೀಂದರ್ ಸಿಂಗ್ ನ್ಯಾಯಾಲಯದೆದುರು ಒಪ್ಪಿಕೊಂಡಿದ್ದಾರೆ.
ಸ್ವತಂತ್ರ ಸಿಖ್ ರಾಷ್ಟ್ರ ಸೃಷ್ಟಿಯ ಭಾಗವಾಗಿ ದಾಳಿ ನಡೆಸುವ ಸಂಚನ್ನು ರೂಪಿಸಲಾಗಿತ್ತು ಎಂದು ಅಲ್ಲಿನ ಫೆಡರಲ್ ನ್ಯಾಯಾಲಯದ ಅಭಿಯೋಜಕರು ಹೇಳಿಕೆ ನೀಡಿದ್ದಾರೆ. ಬೇಡಿಕೆ ಈಡೇರಿಕೆಗಾಗಿ ಗಲಭೆ ಸೃಷ್ಟಿಸಲು ಭಯೋತ್ಪಾದಕರು ಸಂಚು ರೂಪಿಸಿದ್ದರು. ಭಯೋತ್ಪಾದಕರ ರೂಪಿಸಿದ್ದ ಸಂಚಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವ ಬಗ್ಗೆಯೂ ಚರ್ಚಿಸಲಾಗಿತ್ತು. ಆದರೆ ಉಗ್ರರಲ್ಲಿ ಒಬ್ಬರು ಭಾರತಕ್ಕೆ ತೆರಳಿದ ನಂತರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದರು ಎಂದು ಹೇಳಲಾಗಿದೆ.


