ಪಾಕಿಸ್ತಾನದಲ್ಲಿ ರದ್ದುಗೊಂಡ ಸಾರ್ಕ್ ಶೃಂಗವನ್ನು ನಡೆಸಲು ನೇಪಾಳದ ಉತ್ಸಾಹ

ಪಾಕಿಸ್ತಾನ ಇಸ್ಲಾಮಾಬಾದ್ ನಲ್ಲಿ ನಡೆಯಲಿದ್ದ 19 ನೇ ಸಾರ್ಕ್ ಸಮ್ಮೇಳನ ರದ್ದುಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಬೆನ್ನಲ್ಲೇ ನೇಪಾಳ ಸಾರ್ಕ್ ಶೃಂಗವನ್ನು ನಡೆಸಲು ಉತ್ಸಾಹ ತೋರಿದೆ.
ನೇಪಾಳ
ನೇಪಾಳ

ಕಠ್ಮಂಡು: ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನದಲ್ಲಿ ನಡೆಯಲಿದ್ದ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದವು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಇಸ್ಲಾಮಾಬಾದ್ ನಲ್ಲಿ ನಡೆಯಲಿದ್ದ 19 ನೇ ಸಾರ್ಕ್ ಸಮ್ಮೇಳನ ರದ್ದುಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಬೆನ್ನಲ್ಲೇ ನೇಪಾಳ ಸಾರ್ಕ್ ಶೃಂಗವನ್ನು ನಡೆಸಲು ಉತ್ಸಾಹ ತೋರಿದೆ.

ಸಾರ್ಕ್ ಸಮ್ಮೇಳನವನ್ನು ನಡೆಸುವುದರ ಬಗ್ಗೆ ನೇಪಾಳದ ವಿದೇಶಾಂಗ ಸಚಿವಾಲಯದ ಅಧಿಕಾರಿ ಮಾಹಿತಿ ನೀಡಿದ್ದು, ನವೆಂಬರ್ 9-10 ರಂದು ಪಾಕಿಸ್ತಾನದಲ್ಲಿ ನಡೆಯಲಿದ್ದ ಸಾರ್ಕ್ ಸಮ್ಮೇಳನವನ್ನು ಪುನಃ ನಡೆಸುವುದರ ಬಗ್ಗೆ ಸಾರ್ಕ್ ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಸಾರ್ಕ್ ಸದಸ್ಯ ರಾಷ್ಟ್ರವಾಗಿರುವ ನೇಪಾಳ, ಸಾಧ್ಯವಾದಷ್ಟು ಶೀಘ್ರವೇ ಸಾರ್ಕ್ ಶೃಂಗಸಭೆಯನ್ನು ಆಯೋಜಿಸಲು ಯತ್ನಿಸಲಿದ್ದು, ದಿನಾಂಕ ಹಾಗೂ ಪ್ರದೇಶದ ಬಗ್ಗೆ ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸಲಿದೆ ಎಂದು ನೇಪಾಳದ ವಿದೇಶಾಂಗ ಅಧಿಕಾರಿ ಮಾಹಿತಿ ನೀಡಿರುವುದನ್ನು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com