"ಇಸ್ಲಾಮಿಕ್ ಭಯೋತ್ಪಾದನೆ" ಎಂಬ ಪದ ಬಳಕೆ ಮಾಡುವುದಿಲ್ಲ: ಬರಾಕ್ ಒಬಾಮ

ತಾವು ಎಂದಿಗೂ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಪದವನ್ನು ಬಳಕೆ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ)
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ)

ವರ್ಜೀನಿಯಾ: ತಾವು ಎಂದಿಗೂ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಪದವನ್ನು ಬಳಕೆ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

ವರ್ಜೀನಿಯಾದಲ್ಲಿ ನಡೆದ ಖಾಸಗಿ ಸುದ್ದಿವಾಹಿನಿಯೊಂದರ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಒಬಾಮ ಯಾವುದೇ ಕಾರಣಕ್ಕೂ ತಾವು ಉಗ್ರ ದಾಳಿಯಂತಹ  ಪ್ರಕರಣಗಳನ್ನು ಇಸ್ಲಾಮಿಕ್ ಭಯೋತ್ಪಾದನೆ ಎಂಬ ಪದವನ್ನು ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಉಗ್ರ ದಾಳಿ ವೇಳೆ ತಮ್ಮ ಪುತ್ರನನ್ನು ಕಳೆದುಕೊಂಡಿದ್ದ ತಾಯಿಯೊಬ್ಬಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಮ್ಮ ಪುತ್ರನ ಅಗಲಿಕೆ ಕುರಿತಂತೆ ಒಬಾಮರನ್ನು ಪ್ರಶ್ನಿಸಿದ್ದರು. ಈ ವೇಳೆ  ಭಯೋತ್ಪಾದಕರ ದಾಳಿಯಲ್ಲಿ ತನ್ನ ಪುತ್ರನನ್ನು ಕಳೆದುಕೊಂಡಿದ್ದೇನೆ. ಇಸ್ಲಾಮಿಕ್ ಧಾರ್ಮಿಕ ಉದ್ದೇಶಕ್ಕಾಗಿ ತಮ್ಮ ಮಗನನ್ನು ಬಲಿ ಪಡೆಯಲಾಗಿದೆ. ಹೀಗಿದ್ದೂ ನೀವೇಕೆ ಇಸ್ಲಾಮಿಕ್  ಭಯೋತ್ಪಾದನೆ ಎಂಬ ಪದವನ್ನು ಬಳಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾಳೆ.

ತಾಯಿ ಪ್ರಶ್ನೆಗೆ ಸೌಮ್ಯವಾಗಿಯೇ ಉತ್ತರಿಸಿರುವ ಅಮೆರಿಕ ಅಧ್ಯಕ್ಷ ಒಬಾಮ ಅವರು, "ಇಸ್ಲಾಮಿಕ್ ಭಯೋತ್ಪಾದನೆ" ಎಂಬ ಶಬ್ದ ಬಳಸುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ಬಲವಾಗಿ  ಸಮರ್ಥಿಸಿಕೊಂಡಿದ್ದಾರೆ. "ಇಸ್ಲಾಂ ಅನ್ನು ಉಗ್ರವಾದದ ಜೊತೆ ಸೇರಿಸಲು ಯಾವುದೇ ಧಾರ್ಮಿಕ ಆಧಾರಗಳಿಲ್ಲ. ಅಲ್‌ ಖೈದಾ ಅಥವಾ ಇಸ್ಲಾಮಿಕ್ ಸ್ಟೇಟ್‌ನಂಥ ಉಗ್ರ ಸಂಘಟನೆಗಳು ತಮ್ಮ  ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಇಸ್ಲಾಂ ಅನ್ನು ಬಳಸಿಕೊಳ್ಳುತ್ತಿವೆಯಷ್ಟೇ. ಕೆಲವರ ಸ್ವಯಂ ಹಿತಾಸಕ್ತಿಗಾಗಿ ಇಡೀ ಧರ್ಮವನ್ನೇ ದೂಷಿಸುವುದು ಸರಿಯಲ್ಲ. ಯಾವುದೇ ಧರ್ಮವೂ ಮಕ್ಕಳನ್ನು  ಕೊಲ್ಲುವ ಮತ್ತು ಲೈಂಗಿಕ ಗುಲಾಮರನ್ನು ಹೊಂದುವುದನ್ನು ಸಮರ್ಥಿಸುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com