ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗಿನ ಕಾಳಗದಲ್ಲಿ 15 ಸಿರಿಯಾ ಬಂಡುಕೋರರು ಸಾವು

ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ 15 ಮಂದಿ ಸಿರಿಯಾದ ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಟರ್ಕಿಶ್ ಸೇನಾಧಿಕಾರಿಗಳು ತಿಳಿಸಿದ್ದಾರೆ...
ಇಸ್ಲಾಮಿಕ್ ಸ್ಟೇಟ್
ಇಸ್ಲಾಮಿಕ್ ಸ್ಟೇಟ್

ಅಂಕರಾ: ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ 15 ಮಂದಿ ಸಿರಿಯಾದ ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಟರ್ಕಿಶ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಸಿರಿಯಾದ ಅಲ್-ರೈಯ್ ನಗರ ಸೇರಿ ಸಿರಿಯಾದ ಏಳು ನಗರಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ಇಸ್ಲಾಮಿಕ್ ಸ್ಟೇಟ್ ಹಾಗೂ ಬಂಡುಕೋರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ 15 ಮಂದಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಬಂಡುಕೋರರಿಗೆ ಗಾಯಗಳಾಗಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಬೋಸ್ಟೇಪ್, ಹರ್ದನಾಹ ಮತ್ತು ಟುರ್ಕ್ಮೆನ್ ಬರಿ ಬಳಿ ಬಂಡುಕೋರರು ಹಾಗೂ ಇಸ್ಲಾಮಿಕ್ಸ್ ಸ್ಟೇಟ್ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com