ಇಥಿಯೋಪಿಯಾದಲ್ಲಿ ಧಾರ್ಮಿಕ ಆಚರಣೆ ವೇಳೆ ಪ್ರತಿಭಟನೆ: ಕಾಲ್ತುಳಿತಕ್ಕೆ 52 ಸಾವು

ಇಥಿಯೋಪಿಯಾದ ಒರೋಮಿಯಾ ಪ್ರಾಂತ್ಯದಲ್ಲಿ ನಡೆಸಲಾಗುತ್ತಿದ್ದ ಧಾರ್ಮಿಕ ಆಚರಣೆ ವೇಳೆ ಪ್ರತಿಭಟನೆ ನಡೆಸಿದ್ದ ಪರಿಣಾಮ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿ 52ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ...
ಇಥಿಯೋಪಿಯಾದಲ್ಲಿ ಧಾರ್ಮಿಕ ಆಚರಣೆ ವೇಳೆ ಪ್ರತಿಭಟನೆ: ಕಾಲ್ತುಳಿತಕ್ಕೆ 52 ಸಾವು
ಇಥಿಯೋಪಿಯಾದಲ್ಲಿ ಧಾರ್ಮಿಕ ಆಚರಣೆ ವೇಳೆ ಪ್ರತಿಭಟನೆ: ಕಾಲ್ತುಳಿತಕ್ಕೆ 52 ಸಾವು

ಅಡಿಸ್ ಅಬಾಬ: ಇಥಿಯೋಪಿಯಾದ ಒರೋಮಿಯಾ ಪ್ರಾಂತ್ಯದಲ್ಲಿ ನಡೆಸಲಾಗುತ್ತಿದ್ದ ಧಾರ್ಮಿಕ ಆಚರಣೆ ವೇಳೆ ಪ್ರತಿಭಟನೆ ನಡೆಸಿದ್ದ ಪರಿಣಾಮ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿ 52ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ವಾರ್ಷಿಕ ಧಾರ್ಮಿಕ ಆಚರಣೆ ವೇಳೆ ಎರಡು ಗುಂಪುಗಳು ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿವೆ. ಈ ವೇಳೆ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಪ್ರತಿಭಟನಾನಿರತ ಗುಂಪನ್ನು ಚದುರಿಸುವ ಸಲುವಾಗಿ ಅಶ್ರುವಾಯ ಪ್ರಯೋಗವನ್ನು ನಡೆಸಿದ್ದಾರೆ.

ಈ ವೇಳೆ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿ 52ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಾರ್ಷಿಕ ಇರ್ರೀಚಾ (ಧನ್ಯವಾದ ಹೇಳುವುದು)ಹಬ್ಬರವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದ ಕೆಲಸ ಗುಂಪುಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದ್ದವು. ಪರಿಣಾಮ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದು ಎಂದು ಅಲ್ಲಿನ ಸರ್ಕಾರ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com