
ಬೀಜೀಂಗ್: ಕೋಳಿ, ಕುರಿ, ಹಂದಿ, ದನಗಳ ಮಾಂಸಗಳನ್ನು ಮತ್ತೊಂದು ದೇಶಕ್ಕೆ ರಫ್ತು ಮಾಡುವುದು ಸಹಜ. ಆದರೆ ಚೀನಾ ಮನುಷ್ಯನ ಮಾಂಸವನ್ನು ರಫ್ತು ಮಾಡುತ್ತಿದೆ ಎಂಬ ವರದಿಗಳು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಚೀನಾದ ಬೃಹತ್ ಕಾರ್ಖಾನೆಯೊಂದು ಮಾನವನ ಮಾಂಸವನ್ನು ಕತ್ತರಿಸಿ, ಸಂಸ್ಕರಿಸಿ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ವರದಿಯಾಗಿದೆ. ಬೀಫ್ ಹೆಸರಲ್ಲಿ ಚೀನಾ ಆಫ್ರಿಕಾ ದೇಶಗಳಿಗೆ ನರಮಾಂಸವನ್ನು ರಫ್ತು ಮಾಡುತ್ತಿದೆ ಎನ್ನಲಾಗುತ್ತಿದೆ.
ಇಂತಹ ಆಘಾತಕಾರಿ ಸುದ್ದಿ ಬಂದ ಕೂಡಲೇ ಚೀನಾ ಇದನ್ನು ತಳ್ಳಿಹಾಕಿದೆ. ಇದೊಂದು ಬೇಜವಾಬ್ದಾರಿ ವರದಿ ಎಂದು ಚೀನಾ ವಕ್ತಾರ ಹಾಂಗ್ ಲೇ ಹೇಳಿದ್ದಾರೆ.
ಪ್ರಸಕ್ತ ವರ್ಷದ ಆದಿಯಲ್ಲಿ ಝಾಂಬಿಯಾ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಚೀನಾ ಮನುಷ್ಯರ ಮೃತದೇಹಗಳನ್ನು ಸಂಗ್ರಹಿಸಿ ಬೀಫ್ ಹೆಸರಲ್ಲಿ ಇತರ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ವರದಿ ಮಾಡಿತ್ತು.
Advertisement