ಸಿಂಧೂ ಜಲ ಒಪ್ಪಂದವನ್ನು ಭಾರತ ಏಕಪಕ್ಷೀಯವಾಗಿ ರದ್ಧುಗೊಳಿಸಲು ಸಾಧ್ಯವಿಲ್ಲ: ಪಾಕಿಸ್ತಾನ

ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದಿರುವ ಸಿಂಧೂ ಜಲ ಒಪ್ಪಂದವನ್ನು ಯಾವುದೇ ಕಾರಣಕ್ಕೂ ಭಾರತ ಏಕಪಕ್ಷೀಯವಾಗಿ ರದ್ಧು ಪಡಿಸಲು ...
ಸಿಂಧೂ ನದಿ
ಸಿಂಧೂ ನದಿ

ಇಸ್ಲಮಾಬಾದ್: ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದಿರುವ ಸಿಂಧೂ ಜಲ ಒಪ್ಪಂದವನ್ನು ಯಾವುದೇ ಕಾರಣಕ್ಕೂ ಭಾರತ ಏಕಪಕ್ಷೀಯವಾಗಿ ರದ್ಧು ಪಡಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಸಿಂಧೂ ಜಲ ಒಪ್ಪಂದ ಯಾವಾಗ ರದ್ಧಾಗಬೇಕೆಂದು ಎಲ್ಲಿಯೂ ಉಲ್ಲೇಖವಾಗಿಲ್ಲ, ಎರಡು ದೇಶಗಳ ನಡುವೆ ಸಿಂಧೂ ಜಲ ಒಪ್ಪಂದ ನಡೆದಿದೆ, ಆದರೆ ಎರಡೂ ದೇಶಗಳು ಎಲ್ಲಿಯವರೆಗೂ ಜೊತೆಗಿರಬೇಕು ಎಂಬುದು ಅದರಲ್ಲಿ ಉಲ್ಲೇಖವಾಗಿಲ್ಲ. ಒಪ್ಪಂದದಿಂದ ಹೊರ ಹೋಗಲು ಅದರಲ್ಲಿ ಅವಕಾಶವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಕಚೇರಿ ವಕ್ತಾರ ನಫೀಸ್ ಝಕಾರಿಯಾ ತಿಳಿಸಿದ್ದಾರೆ.

ಸಿಂಧೂ ಜಲ ಒಪ್ಪಂದದ ಆರ್ಟಿಕಲ್ 12 ರ ಉಪ ಅನುಬಂಧಗಳ ಪ್ರಕಾರ (3) ಮತ್ತು (4)ರ ನಿಯಮದಡಿ ಒಪ್ಪಂದವನ್ನು ಮಾರ್ಪಡಿಸುವುದಾಗಲಿ ಅಥವಾ ಏಕಪಕ್ಷೀಯವಾಗಿ ರದ್ಧುಗೊಳಿಸುವುದಾಗಲಿ ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.

ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸುತ್ತಿದ್ದು ಅದರ ಬದ್ಧತೆ ಮತ್ತು ಜವಾಬ್ದಾರಿಗಳಿಂದ ಬಾರತ ವಿಮುಖವಾಗುತ್ತಿರುವುದನ್ನು ವಿಶ್ವ ಸಂಸ್ಥೆ ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ತೀರಾ ಹತ್ತಿರದಿಂದ ಪರಿಸ್ಥಿತಿಯನ್ನ ಗಮಿನಿಸುತ್ತಿದ್ದು ತಕ್ಕ ಸಮಯದಲ್ಲಿ ಪ್ರತಿಕ್ರಿಯೆ ನೀಡಲಿದೆ ಎಂದು ತಿಳಿಸಿದರು,  ಬ್ರಹ್ಮ ಪುತ್ರ ನದಿಯ ಉಪನದಿಗೆ ಚೀನಾ ಟಿಬೆಟ್ ನಲ್ಲಿ ತಡೆ ಹಿಡಿದಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಮಗೆ ಆ ವಿಷಯದ ಬಗ್ಗೆ ಅರಿವಿಲ್ಲ ಎಂಬುದಾಗಿ ಹೇಳಿದ ಅವರು ಈ ಪ್ರಶ್ನೆಗೆ ನೀವು ಚೀನಾ ಸರ್ಕಾರವನ್ನೇ ಕೇಳಿದರೆ ಮಾಹಿತಿ ಸಿಗಬಹುದು ಎಂದು ತಿಳಿಸಿದರು.

ಭಾರತ ಯಾವುದೇ ಕಾರಣಕ್ಕೂ ಸಿಂಧೂ ನದಿ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ಧುಗೊಳಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸತ್ರಾಜ್ ಅಜೀಜ್ ಸೇರಿದಂತೆ ಹಲವು ಪಾಕ್ ನಾಯಕರು ಈ ಮೊದಲು ಹೇಳಿದ್ದರು.

ಒಂದು ವೇಳೆ ಭಾರತ ಏಕಪಕ್ಷೀಯವಾಗಿ ಒಪ್ಪಂದವನ್ನು ರದ್ದುಗೊಳಿಸಿದರೇ ಇದನ್ನು ಯುದ್ದದ ಕ್ರಮ ಎಂದು ಪಾಕ್ ಪರಿಗಣಿಸುತ್ತದೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com