

ಚೆನ್ನೈ: ಜನವರಿ ತಿಂಗಳಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿರುವ ತಮಿಳುನಾಡಿನ ಜನರು ಪೊಂಗಲ್ ನ್ನು ಆಚರಿಸುತ್ತಾರೆ. 2017 ರಿಂದ ಜನವರಿಯನ್ನ ತಮಿಳು ಪಾರಂಪರಿಕ ತಿಂಗಳನ್ನಾಗಿ ಆಚರಿಸಲು ಕೆನಡಾದ ಆದೇಶ ನೀಡಿದೆ.
ಕೆನಡಾದಲ್ಲಿ ಜನವರಿ ತಿಂಗಳನ್ನು ತಮಿಳು ಪಾರಂಪರಿಕ ತಿಂಗಳ ಆಚರಣೆಗೆ 2017 ಜನವರಿಯಿಂದ ಚಾಲನೆ ದೊರೆಯಲಿದ್ದು, ಕೆನಡಾದ 150 ನೇ ವರ್ಷಾಚರಣೆಯ ಜೊತೆ ಜೊತೆಗೆ ತಮಿಳು ಪಾರಂಪರಿಕ ತಿಂಗಳನ್ನು ಆಚರಿಸಲಾಗುತ್ತದೆ.
ವಾರದ ಹಿಂದೆ ಈ ಕುರಿತಂತೆ ಕೆನಡಾದ ಹೌಸ್ ಆಫ್ ಕಾಮನ್ಸ್ ತಮಿಳು ಪಾರಂಪರಿಕ ತಿಂಗಳನ್ನು ಆಚರಿಸಲು ಒಮ್ಮತದ ನಿರ್ಣಯ ಗೊಂಡಿದೆ. ತಮಿಳುನಾಡಿನ ಮೂಲದ ಕೆನಡಾದ ಸಂಸದ ಗ್ಯಾರಿ ಆನಂದಾಸನಗರೀ ಹೌಸ್ ಆಫ್ ಕಾಮನ್ಸ್ ನಲ್ಲಿ ನಿರ್ಣಯ ಮಂಡಿಸಿದ್ದರು. ಈ ಬಗ್ಗೆ ಸೆಪ್ಟೆಂಬರ್ ನಲ್ಲಿ ಚರ್ಚೆ ನಡೆಸಲಾಗಿತ್ತು.
ಕೆನಡಾದ ಅಭಿವೃದ್ಧಿಗೆ ತಮಿಳುನಾಡಿನ ಮೂಲದವರು ನೀಡಿರುವ ಕೊಡುಗೆಯನ್ನು ಸ್ಮರಿಸಲು ಜನವರಿ ತಿಂಗಳನ್ನು ತಮಿಳು ಪಾರಂಪರಿಕ ತಿಂಗಳನ್ನಾಗಿ ಘೋಷಿಸಲಾಗಿದೆ. ಕೆನಡಾದಲ್ಲಿ ಬೇರೆ ಸಮುದಾಯಗಳಂತೆ ತಮಿಳುನಾಡಿನ ಮೂಲದವರೂ ಸಹ ಹಲವಾರು ಸಮಸ್ಯೆಗಳನ್ನು ಎದುರಿಸಿ ಕೆನಡಾದ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದು ಹೌಸ್ ಆಫ್ ಕಾಮನ್ಸ್ ಬಣ್ಣಿಸಿದೆ.