ಯೆಮೆನ್ ಬಿಕ್ಕಟ್ಟು ಮತ್ತು ಅಮೆರಿಕ ದಾಳಿ (ಸಂಗ್ರಹ ಚಿತ್ರ)
ಯೆಮೆನ್ ಬಿಕ್ಕಟ್ಟು ಮತ್ತು ಅಮೆರಿಕ ದಾಳಿ (ಸಂಗ್ರಹ ಚಿತ್ರ)

ತಾರಕಕ್ಕೇರಿದ ಯೆಮೆನ್ ಬಿಕ್ಕಟ್ಟು: ಹೌತಿ ಪಡೆಗಳ ಮೇಲೆ ಮುಗಿಬಿದ್ದ ಅಮೆರಿಕ ಸೇನೆ!

ಉಗ್ರರ ದಾಳಿ ಮತ್ತು ಆಂತರಿಕ ಸಂಘರ್ಷದಿಂದ ತಲ್ಲಣಿಸಿ ಹೋಗಿರುವ ಯೆಮೆನ್ ಇದೀಗ ಅಕ್ಷರಶಃ ಯುದ್ಧಭೂಮಿಯಾಗಿ ಮಾರ್ಪಟ್ಟಿದ್ದು, ಇದೀಗ ನೇರವಾಗಿ ಅಮೆರಿಕ ಪಡೆಗಳು ಇರಾನ್ ಮಿತ್ರಪಡೆ ಹೌತಿ ಪಡೆಗಳ ಮೇಲೆ ನೇರ ದಾಳಿ ನಡೆಸುತ್ತಿವೆ.

ಸನಾ: ಉಗ್ರರ ದಾಳಿ ಮತ್ತು ಆಂತರಿಕ ಸಂಘರ್ಷದಿಂದ ತಲ್ಲಣಿಸಿ ಹೋಗಿರುವ ಯೆಮೆನ್ ಇದೀಗ ಅಕ್ಷರಶಃ ಯುದ್ಧಭೂಮಿಯಾಗಿ ಮಾರ್ಪಟ್ಟಿದ್ದು, ಇದೀಗ ನೇರವಾಗಿ ಅಮೆರಿಕ ಪಡೆಗಳು ಇರಾನ್  ಮಿತ್ರಪಡೆ ಹೌತಿ ಪಡೆಗಳ ಮೇಲೆ ನೇರ ದಾಳಿ ನಡೆಸುತ್ತಿವೆ.

ಮೂಲಗಳ ಪ್ರಕಾರ ಯೆಮೆನ್ ನಲ್ಲಿರುವ ಇರಾನ್ ಮಿತ್ರ ಪಡೆಗಳಾದ ಹೌತಿ ಪಡೆಗಳು ಅಮೆರಿಕ ಸೇನೆಗೆ ಸೇರಿದ ಯುದ್ಧ ನೌಕೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಆದರೆ ತಾಂತ್ರಿಕ  ದೋಷದಿಂದಾಗಿ ಈ ಕ್ಷಿಪಣಿಗಳು ನಿಗದಿತ ಗುರಿ ತುಲುಪುವಲ್ಲಿ ವಿಫಲವಾಗಿದ್ದವು. ಯುಎಸ್ ಎಸ್ ಮ್ಯಾಸನ್ ಎಂಬ ಸಮರನೌಕೆಯ ವಿರುದ್ಧ 3 ಕ್ಷಿಪಣಿಗಳನ್ನು ಹಾರಿಸಲಾಗಿತ್ತು ಎಂದು ಪೆಂಟಗನ್  ತಿಳಿಸಿದೆ. ಇದರಿಂದ ಭಾರಿ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ನೇತೃತ್ವದ ವೈಟ್ ಹೌಸ್ ಹೌತಿ ಪಡೆಗಳ ಮೇಲೆ ದಾಳಿ ನಡೆಸಲು ಸೇನಾಪಡೆಗಳಿಗೆ ಆದೇಶಿಸಿದೆ.

ಆದೇಶ ದೊರೆತ ಬೆನ್ನಲ್ಲೇ ಅಮೆರಿಕ ಸೇನಾಪಡೆಗಳು ಇರಾನ್ ಮಿತ್ರ ಪಡೆಗಳಾದ ಹೌತಿ ಪಡೆಗಳ ಮೂರು ಕರಾವಳಿ ಪ್ರದೇಶಗಳ ಮೇಲೆ ದಾಳಿ ನಡೆಸಿವೆ. ಮೂಲಗಳ ಪ್ರಕಾರ ಇದೇ ಮೂರು  ಕರಾವಳಿ ಪ್ರದೇಶದಲ್ಲಿರುವ ಮೂರು ರಾಡಾರ್ ಗಳ ಮೂಲಕ ಹೌತಿ ಪಡೆಗಳು ಅಮೆರಿಕ ನೌಕಾಪಡೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಈ ಮೂರು  ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ  ಬಗ್ಗೆ ಪ್ರತಿಕ್ರಿಯಿಸಿರುವ ಪೆಂಟಗನ್ ವಕ್ತಾರರು, ಅಮೆರಿಕ ಯುದ್ಧ ನೌಕೆಗಳ ವಿರುದ್ಧ ಕ್ಷಿಪಣಿ ಹಾರಿಸಿದ ಹೌತಿ ಪಡೆಗಳ ವಿರುದ್ಧ ಸೀಮಿತ ದಾಳಿ ನಡೆಸುವಂತೆ ಸೇನಾಪಡೆಗಳಿಗೆ  ಆದೇಶಿಸಿದ್ದೇವೆ. ಅದರಂತೆ ಮುಂಜಾನೆ ಸುಮಾರು 4 ಗಂಟೆ ಹೊತ್ತಿನಲ್ಲಿ ಯುಎಸ್ ಎಸ್ ನಿಟ್ಜ್ ಯುದ್ಧನೌಕೆ ಮೂಲಕ ತೋಮಹಕ್ ಕ್ಷಿಪಣಿಯನ್ನು ಉಡಾಯಿಸಲಾಗಿದೆ. ಆದರೆ ಈ ವರೆಗೂ ಹೌತಿ  ಪಡೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟಾರೆ ಯೆಮೆನ್ ಆಂತರಿಕ ಬಿಕ್ಕಟ್ಟು ಇದೀಗ ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಅಮೆರಿಕ ದಾಳಿಯೊಂದಿಗೆ ಇರಾನ್ ಕೂಡ ಆಕ್ರೋಶಗೊಂಡಿದೆ ಎಂದು ಹೇಳಲಾಗುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com